Select Your Language

Notifications

webdunia
webdunia
webdunia
webdunia

ವೀರಣ್ಣ ಮತ್ತಿಕಟ್ಟಿ ವಿರುದ್ಧ ಆರೋಪ ಮಾಡೋಲ್ಲ: ಈಶ್ವರಪ್ಪ

ವೀರಣ್ಣ ಮತ್ತಿಕಟ್ಟಿ ವಿರುದ್ಧ ಆರೋಪ ಮಾಡೋಲ್ಲ: ಈಶ್ವರಪ್ಪ
ನಂಜನಗೂಡು , ಭಾನುವಾರ, 2 ಏಪ್ರಿಲ್ 2017 (16:03 IST)
ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿಯವರ ವಿರುದ್ಧ ಆರೋಪ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 
 
ಎಂಎಲ್‌ಸಿ ವೀರಣ್ಣ ಮತ್ತಿಕಟ್ಟಿ ಅಳಿಯನ ಬಂಧನ ಪ್ರಕರಣ ಕುರಿತಂತೆ ಮಾತನಾಡಿದ ಅವರು, ವೀರಣ್ಣ ಮತ್ತಿಕಟ್ಟಿ ವೈಯಕ್ತಿಕವಾಗಿ ತುಂಬಾ ಒಳ್ಳೆಯ ಮನುಷ್ಯರಾಗಿದ್ದಾರೆ. ಅವರ ಅಳಿಯ ಪ್ರಕರಣದಲ್ಲಿ ಸಿಲುಕಿದ್ದರಿಂದ ಕಾಂಗ್ರೆಸ್ ಮೇಲೆ ಆರೋಪ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
 
ಮತ್ತಿಕಟ್ಟಿಯವರ ಪ್ರಕರಣವನ್ನು ರಾಜಕೀಯಗೊಳಿಸುವುದಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 
ವೀರಣ್ಣ ಮತ್ತೀಕಟ್ಟಿ ಅವರ ಅಳಿಯ ಪ್ರವೀಣ್ ಕುಮಾರ್ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 9,14 ಕೋಟಿ ರೂಪಾಯಿ ಹಳೆ ನೋಟುಗಳು ಪತ್ತೆಯಾಗಿದ್ದವು.
 
ಸಿಸಿಬಿ ಪೊಲೀಸರು ಪ್ರವೀಣ್ ಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, 9.14 ಕೋಟಿ ರೂಪಾಯಿಗಳ ಸಂಗ್ರಹದ ಹಿಂದಿರುವ ರಹಸ್ಯವನ್ನು ಬಹಿರಂಗಪಡಿಸಲು ಹರಸಾಹಸಪಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಎಲ್ಲಾ ಚುನಾವಣೆಗಳು ಪ್ರತಿಷ್ಠೆಯಾಗಿವೆ: ಸಿಎಂ ಸಿದ್ದರಾಮಯ್ಯ