Select Your Language

Notifications

webdunia
webdunia
webdunia
webdunia

ನಾಳೆಯಿಂದ ನಗರದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

water

geetha

bangalore , ಸೋಮವಾರ, 26 ಫೆಬ್ರವರಿ 2024 (14:01 IST)
ಬೆಂಗಳೂರು-ದಿನದಿಂದ ದಿನಕ್ಕೆ ಹೆಚ್ಚುತ್ತಿರುವ  ನೀರಿನ ಬೇಡಿಕೆ ಬೆನ್ನಲ್ಲೇ ನಾಳೆಯಿಂದ ಬೆಂಗಳೂರಿನ ಹಲವೆಡೆ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತವಾಗಲಿದೆ.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಹಿನ್ನಲೆ ನಗರದ ಹಲವೆಡೆ ಫೆಬ್ರವರಿ 27 ಮತ್ತು 28 ರಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.27 ರ ಬೆಳಿಗ್ಗೆ 6 ರಿಂದ 28 ರ ಬೆಳಿಗ್ಗೆ 6 ರವರೆಗೆ ಹಲವೆಡೆ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತವಾಗಲಿದೆ.

BWSSB ನೀರಿನ ಬಲ್ಕ್ ಫ್ಲೋ ಮೀಟರ್‌ಗಳನ್ನು ಅಳವಡಿಸುವ ಸಲುವಾಗಿ ನಂದಿನಿ ಲೇಔಟ್, ಬಿಎಚ್‌ಇಎಲ್ ಲೇಔಟ್, ಮಲ್ಲತ್ತಹಳ್ಳಿ, ಎನ್‌ಜಿಇಎಫ್ ಲೇಔಟ್, ಮೈಸೂರು ರಸ್ತೆ, ಶಿರ್ಕೆ, ಶಿವಣ್ಣ ಲೇಔಟ್, ಪ್ರಶಾಂತನಗರ, ತಿಮ್ಮೇನಹಳ್ಳಿ,ಗೋವಿಂದರಾಜನಗರ, ಕೆಎಚ್‌ಬಿ ಕಾಲೋನಿ, ದಾಸರಹಳ್ಳಿ, ಜಿಕೆಡಬ್ಲ್ಯು ಲೇಔಟ್, ಬಸವೇಶ್ವರ ಲೇಔಟ್, ಲಾನಜರಸಯ್ಯ ಲೇಔಟ್,ಸಿಂಗಾಪುರ, ಎಂಎಸ್ ಪಾಳ್ಯ, ರಾಮಚಂದ್ರಾಪುರ, ಡಿಫೆನ್ಸ್ ಲೇಔಟ್, ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ,ಚಾಮುಂಡಿನಗರ, ಭುವನೇಶ್ವರಿ ನಗರ, ಈಜಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಅಕ್ಕಮ್ಮ ರಸ್ತೆ, ಮುನಿಯಪ್ಪ ರಸ್ತೆ, ಸಂಜಯನಗರ, ರಾಮಾಂಜನೇಯ ಲೇಔಟ್, ಶಾನಭಾಗ್ ಲೇಔಟ್, ವೀರಪ್ಪ ರೆಡ್ಡಿ ಲೇಔಟ್, ರೇನ್‌ಬೋ ಲೇಔಟ್, ರೇನ್‌ಬೋ ಲೇಔಟ್ , ಮಂಜುನಾಥ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ನೈಋತ್ಯ ರೈಲ್ವೇ ಯೋಜನೆಗೆ ಪ್ರಧಾನಿ ಮೋದಿ ಚಾಲನೆ