Select Your Language

Notifications

webdunia
webdunia
webdunia
webdunia

ಕಂತೆ ಕಂತೆ ನೋಟುಗಳ ಮೇಲೆ ವರ ಮಹಾಲಕ್ಷ್ಮೀ ಪೂಜೆ

ಕಂತೆ ಕಂತೆ ನೋಟುಗಳ ಮೇಲೆ ವರ ಮಹಾಲಕ್ಷ್ಮೀ ಪೂಜೆ
ಬೆಂಗಳೂರು , ಮಂಗಳವಾರ, 8 ಆಗಸ್ಟ್ 2017 (17:43 IST)
ವರ ಮಹಾಲಕ್ಷ್ಮೀ ಹಬ್ಬದಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಹಣವನ್ನ ದೇವರ ಮುಂದೆ ಇಟ್ಟು ಪೂಜೆ ಮಾಡುವುದು ವಾಡಿಕೆ. ಬೆಂಗಳೂರಿನ ಬಿಡಿಎ ಸೂರಿ ಎಂಬ ವ್ಯಕ್ತಿಯಲ್ಲಿ ತಮ್ಮ ಮನೆಯಲ್ಲಿ ಕಂತೆ ಕಂತೆ 500 ಮೇಲೆ ದೇವರನ್ನ ಕೂರಿಸಿ ಪೂಜೆ ಮಾಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

500 ಮತ್ತು 100 ರೂಪಾಯಿ ನೋಟಿನ ಕಂತೆಗಳ ಮೇಲೆ ದೇವರನ್ನ ಕೂರಿಸಿ, ದೇವರ ಮುಂದೆ ಬೆಳ್ಳಿ ಪಾತ್ರೆಗಳಲ್ಲಿ ಬಂಗಾರದ ಒಡವೆಗಳನ್ನ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಫೋಟೋಗಳನ್ನ ನೋಡುವ ಮಹಾಲಕ್ಷ್ಮಿ ಧರೆಗಿಳಿದುಬಂದಂತೆ ಈ ದೃಶ್ಯ ಭಾಸವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್, ಬ್ಯಾಂಕ್`ನಿಂದ ಪೂಜೆಗೆಂದು 83 ಲಕ್ಷ ರೂಪಾಯಿಯನ್ನ ಡ್ರಾ ಮಾಡಿ ತಂದು ಪೂಜೆ ನೆರವೇರಿಸಿದ್ದೇವೆ. ಇದೆಲ್ಲವೂ ನಾನೂ ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಮತ್ತು ನನ್ನ ಕುಟುಂಬದವರೆಲ್ಲ ಕಷ್ಟ ಪಟ್ಟು ಹಣ ಸಂಪಾದನೆ ಮಾಡಿರುವುದಾಗಿ ಸುರೇಶ್ ಹೇಳಿದ್ದಾರೆ. ಸೈಟ್`ಗಳನ್ನ ಖರೀದಿಸಿ ರಿಸೆಲ್ ಮಾಡುವ ಕೆಲಸ ಆರಂಭಿಸಿದೆ. ನಮ್ಮ ತಂದೆಗೆ ವಯಸ್ಸಾಗಿದ್ದು, ಬಿಪಿ, ಶುಗರ್ ಇದ್ದರೂ ಕಷ್ಟಪಟ್ಟು ದುಡಿಯುತ್ತಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಪಮಾ ಬಾಕ್ಸ್‌ನಲ್ಲಿ ದುಬೈಗೆ 1.3 ಕೋಟಿ ವಿದೇಶಿ ಕರೆನ್ಸಿ ಸಾಗಾಣೆ: ಇಬ್ಬರು ಅರೆಸ್ಟ್