Webdunia - Bharat's app for daily news and videos

Install App

ರೈಸೆನ್ ಮರಗಳ ಮೌಲ್ಯ - ಮರಕ್ಕೆ ಸೆಕ್ಯೂರಿಟಿ..!

Webdunia
ಭಾನುವಾರ, 31 ಅಕ್ಟೋಬರ್ 2021 (21:03 IST)
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್:‌ ಮರದ ಮೌಲ್ಯ ತಿಳಿದಿರುವ ಜನ, ಮರಗಳನ್ನ ಪ್ರೀತಿಸುತ್ತಾರೆ. ಯಾರಾದ್ರೂ ಮರಗಳಿಗೆ ಹಾನಿ ಮಾಡೋದನ್ನ ನೋಡಿದ್ರೆ ಖಂಡಿತಾ ಸಹಿಸೋಲ್ಲ. ಅದನ್ನ ಉಳಿಸೋಕೆ ಏನೇಲ್ಲಾ ಪ್ರಯತ್ನ ಮಾಡ್ಬೇಕೋ ಎಲ್ಲವನ್ನೂ ಮಾಡ್ತಾರೆ.
 
ಇದಕ್ಕೆ ಉತ್ತಮ ಉದಾಹರಣೆ ಚಿಪ್ಕೊ ಚಳುವಳಿ(Chipko Movement). ಮರಗಳಿದ್ದರೆ ಮಾತ್ರ ಭೂಮಿಯ ಮೇಲೆ ಜೀವದ ಅಸ್ತಿತ್ವ ಸಾಧ್ಯ. ಇಲ್ಲದಿದ್ದರೆ ಸ್ವತಃ ಜೀವಿ ಅಳಿವಿನ ಅಂಚಿಗೆ ತಲುಪಿ ಬಿಡ್ತಾನೆ. ಹಾಗಾಗಿನೇ ದೇಶದಲ್ಲಿ ಅರಣ್ಯದ ಶೇಕಡಾವಾರು ಹೆಚ್ಚಿಸಲು ಸರ್ಕಾರಗಳು ಕೂಡ ಶ್ರಮಿಸುತ್ತಿವೆ. ಈ ಮಧ್ಯೆ ಹೀಗೊಂದು ವಿಐಪಿ ಮರ(VIP tree)ದ ಕುರಿತು ಸಖತ್ ಸುದ್ದಿ ವೈರಲ್‌ ಆಗ್ತಿದೆ.‌
ಈ ಮರ ಇರುವುದು ಮಧ್ಯಪ್ರದೇಶದ ರೈಸೆನ್(Raissen) ಜಿಲ್ಲೆಯಲ್ಲಿ.. ಈ ಮರದ ಆರೈಕೆಯ ಬಗ್ಗೆ ತಿಳಿದ್ರೆ ನೀವು ಕೂಡ ಅಚ್ಚರಿ ಪಡ್ತೀರಾ. ಹೌದು, ಇದು ಕೇವಲ ಮರವಲ್ಲ. ಇದೊಂದು ವಿವಿಐಪಿಗಿಂತ ಹೆಚ್ಚು. ಹೌದು ಸ್ವಾಮಿ, ಮರವನ್ನು ರಕ್ಷಿಸೋಕೆ ಅಂತಾನೇ 24 ಗಂಟೆಗಳ ಕಾಲ ಭದ್ರತಾ ಸಿಬ್ಬಂದಿ ಕಾವಲು ಕಾಯ್ತಾರೆ. ಅಷ್ಟೇ ಅಲ್ಲ ಮರದ ಒಂದೇ ಒಂದು ಎಲೆ ಉದುರಿದ್ರೂ ಅಧಿಕಾರಿಗಳಿಗೆ ಆ ದಿನ ನಿದ್ರೆ ಬರೋದೆ ಡೌಟು ಅನ್ಸುತ್ತೆ. ಯಾಕಂದ್ರೆ, ಆ ಪಾಟಿ ಕಾಳಜಿ ಮಾಡ್ತಾರೆ ಈ ಮರಕ್ಕೆ. ಇಷ್ಟಕ್ಕೂ ಆ ಮರವಾದ್ರು ಯಾವ್ದು? ಅದಕ್ಯಾಕೆ ಅಷ್ಟೊಂದು ಸೆಕ್ಯೂರಿಟಿ ನೀಡಲಾಗ್ತಿದೆ?
 
ಅಸಲಿಗೆ ಇದೊಂದು ಬೋಧಿ ಮರ.. ಬೌದ್ಧ ವಿಶ್ವವಿದ್ಯಾಲಯವು ನಿರ್ಮಿಸಿದ ಸಲಾಮತ್ ಬೆಟ್ಟದ ಮೇಲೆ ಈ ಬೋಧಿ ಮರವನ್ನ ನೆಡಲಾಗಿದೆ. ಈ 15 ಅಡಿ ಎತ್ತರದ ಮರವನ್ನು ರಕ್ಷಿಸಲು ಐದು ಮಂದಿ ಭದ್ರತಾ ಸಿಬ್ಬಂದಿಗಳನ್ನ ನೇಮಿಸಲಾಗಿದೆ. ಅವ್ರು ನಿರಂತರವಾಗಿ ಇದನ್ನ ಕಾವಲು ಕಾಯುತ್ತಿರ್ತಾರೆ. ಇನ್ನು ಪ್ರತಿ 15 ದಿನಗಳಿಗೊಮ್ಮೆ ಕೃಷಿ ಇಲಾಖೆ ಅಧಿಕಾರಿಗಳು ಈ ಮರದ ಆರೋಗ್ಯ ಸ್ಥಿತಿ ತಪಾಸಣೆ ಮಾಡ್ತಾರೆ. ಅಷ್ಟೇ ಅಲ್ಲ ಅದರ ಒಟ್ಟು ನಿರ್ವಹಣೆಗಾಗಿ ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನ ಖರ್ಚು ಮಾಡುಲಾಗ್ತಿದೆ.ಅಂದ್ಹಾಗೆ, ಈ ಬೋಧಿ ಮರವನ್ನ ಸಾಂಚಿಯ ಸಲಾಮತ್ಪುರ್ ಬೆಟ್ಟದ ಮೇಲೆ ನೆಡಲಾಗಿದೆ ಇದು ಇತಿಹಾಸದಲ್ಲಿ ಬಹಳ ಮುಖ್ಯವಾದ ಬೌದ್ಧ ವಿಶ್ವವಿದ್ಯಾಲಯವನ್ನ ಹೊಂದಿದೆ. ಈ ಮರವನ್ನ ಸೆಪ್ಟೆಂಬರ್ 21, 2012ರಂದು ಅಂದಿನ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ನೆಟ್ಟರು. ಇನ್ನೀದು ಬೌದ್ಧ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯ ಮರವಾಗಿದೆ. ಬೌದ್ಧ ಧರ್ಮಗ್ರಂಥಗಳ ಪ್ರಕಾರ, ಬುದ್ಧನು ಬೋಧ ಗಯಾದಲ್ಲಿರುವ ಬೋಧಿ ಮರದ ಕೆಳಗೆ ಜ್ಞಾನೋದಯವಾಯ್ತು. ಇನ್ನು ಚಕ್ರವರ್ತಿ ಅಶೋಕ ಕೂಡ ಬೋಧಿ ಮರದ ಕೆಳಗೆ ಆಶ್ರಯ ಪಡೆದಿದ್ದನಂತೆ. ಅದಕ್ಕಾಗಿಯೇ ಈ ಬೋಧಿ ಮರವನ್ನ ಅತ್ಯಂತ ಭದ್ರವಾದ ಭದ್ರತೆಯ ನಡುವೆ ರಕ್ಷಿಸಲಾಗಿದೆ. 15 ಅಡಿ ಎತ್ತರದ ಮರದ ಸುತ್ತ ಕಬ್ಬಿಣದ ಬೇಲಿಯನ್ನ ನಿರ್ಮಿಸಲಾಗಿದೆ. ಇದನ್ನು ಯಾವಾಗಲೂ ಐದು ಭದ್ರತಾ ಸಿಬ್ಬಂದಿಗಳು ಕಾವಾಲು ಕಾಯ್ತಾರೆ. ಈ ಮರದ ನಿರ್ವಹಣೆಗೆ ಪ್ರತಿ ವರ್ಷ ಸುಮಾರು 12 ರಿಂದ 15 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆಯಂತೆ. ಇನ್ನು ಈ ಮರವನ್ನ ನೋಡೋಕೆ ಅಂತಾನೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಧಿವೇಶನ ಆರಂಭಕ್ಕೆ ಮೊದಲೇ ಬಿಜೆಪಿ ಪ್ರತಿಭಟನೆ

ಧರ್ಮಸ್ಥಳದ ಬಗ್ಗೆ ಸದನದಲ್ಲೂ ಪ್ರಸ್ತಾಪ ಮಾಡ್ತೀವಿ ಎಂದ ಸಿಟಿ ರವಿ

ಪೊಲೀಸರಿಗೆ ಗೌರವ ಕೊಡೋದು ಹೇಗೆಂದು ಮೋದಿ ನೋಡಿ ಕಲಿಯಿರಿ: ಟ್ರೋಲ್ ಆದ ಸಿದ್ದರಾಮಯ್ಯ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ನಮ್ಮ ನಾಶ ಮಾಡಿದ್ರೆ ಅರ್ಧ ಪ್ರಪಂಚವನ್ನೇ ಮುಳುಗಿಸ್ತೀವಿ: ಪಾಕ್ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಬೆದರಿಕೆ

ಮುಂದಿನ ಸುದ್ದಿ
Show comments