Daily Horoscope
✕

ರಾಜ್ಯದಲ್ಲಿ ಸರ್ಕಾರ ನಡೆಸ್ತಿರೋದು ಕನ್ನಡಿಗರೋ, ಕೇರಳೀಯರೋ, ವೋಟ್ ಗಾಗಿ ಈ ಮಟ್ಟಕ್ಕಿಳಿಯುತ್ತಾರಾ

Krishnaveni K
ಸೋಮವಾರ, 29 ಡಿಸೆಂಬರ್ 2025 (10:46 IST)
ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರೋದು ಕನ್ನಡಿಗರೋ, ಕೇರಳದವರೋ.. ವೋಟ್ ಬ್ಯಾಂಕ್ ಗಾಗಿ ಸರ್ಕಾರ ಈ ಮಟ್ಟಕ್ಕಿಳಿಯುವುದೇ ಎಂದು ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಗಿಲು ಲೇಔಟ್ ಅಕ್ರಮ ವಸತಿಗಳ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಗೆ ಅವರು ಈ ರೀತಿ ಕಿಡಿ ಕಾರಿದ್ದಾರೆ.

ಕೇರಳ ಸರ್ಕಾರ ಈ ವಿಚಾರದಲ್ಲಿ ಮೂಗು ತೂರಿಸಿದ್ದಕ್ಕೆ ಮತ್ತು ಕಾಂಗ್ರೆಸ್ ಹೈಕಮಾಂಡ್ ನಿಂದ ಸೂಚನೆ ಬಂದ ಬೆನ್ನಲ್ಲೇ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದವರಿಗೆ ಬೇರೆ ಕಡೆ ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಸುನಿಲ್ ಕುಮಾರ್ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

‘ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವುದು ಕನ್ನಡಿಗರೋ, ಕೇರಳಿಗರೋ  ?
ಅಧಿಕಾರ ಹಸ್ತಾಂತರದ ಗೊಂದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮುಳುಗಿ ಮೈಮರೆತಿರುವಾಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಮ್ಮ ರಾಜ್ಯದಲ್ಲಿ ಆಡಳಿತ ಹೇಗಿರಬೇಕೆಂದು ಡಿಕ್ಟೇಟ್ ಮಾಡುತ್ತಾರೆ.

ಅದನ್ನು  ನೋಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲಯಾಳಿ ಕೆ.ಸಿ.ವೇಣುಗೋಪಾಲ್ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಇದಾದ ಬಳಿಕ ಕೋಗಿಲು ಕ್ರಾಸ್ ಬಳಿ ಅಕ್ರಮ ವಲಸಿಗರು ರಚಿಸಿಕೊಂಡಿದ್ದ ಲೇಔಟ್ ತೆರವು ಮಾಡಿದ್ದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡುತ್ತಾರೆ.

ಎಲ್ಲ ಖುರ್ಚಿ ಮೋಹ, ಕೇರಳ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ವೋಟು ದಕ್ಕಿಸಿಕೊಳ್ಳಬೇಕೆಂಬ ದಾಹ. ಈ ಹಿಂದೆ ವಯನಾಡಿನಲ್ಲಿ ಆನೆ ದಾಳಿಗೆ ಮೃತಪಟ್ಡವರಿಗೆ ೩೦ ಲಕ್ಷ ರೂ. ಪರಿಹಾರ ನೀಡಿದ್ದ ಸರ್ಕಾರ ಈಗ ಕೇರಳ ಚುನಾವಣೆ ಕಾರಣಕ್ಕೆ ರಾಜ್ಯದ ಮರ್ಯಾದೆಯನ್ನೇ ಬೀದಿ ಪಾಲು ಮಾಡಿದೆ.

ಕರ್ನಾಟಕದ ಬಂಡೆ ಸರ್ಕಾರವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಬುಲ್ಡೋಜರ್ ಅಡಿಯಲ್ಲಿ ಹಾಕಿ ರೋಲ್ ಮಾಡಿದರೂ ಸಹಿಸಿಕೊಂಡಿರುವ ಕಾಂಗ್ರೆಸ್ ನ "ವೀರಕನ್ನಡಿಗರಿಗೆ" ಭೇಷ್ ಎನ್ನಲೇಬೇಕು ಬಿಡಿ’ ಎಂದು ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂಕೋರ್ಟ್ ಆದೇಶವನ್ನೂ ಧಿಕ್ಕರಿಸಿದ ಸಿಎಂ ಜೊಸೆಫ್ ವಿಜಯ್ ಸರ್ಕಾರ: ಕಾರ್ತಿಕ ದೀಪಂ ಬೆಳಗದ್ದಕ್ಕೆ ಹಿಂದೂಗಳ ಆಕ್ರೋಶ Video

ಜಪಾನ್ ಪ್ರವಾಸದ ನಡುವೆಯೇ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ವಿಡಿಯೋ ಕರೆ

ಏನು ಮಾಡ್ತೀರೋ ಮಾಡ್ಕೊಳ್ಳಿ.. ಫುಟ್ ಪಾತ್ ಮೇಲೆ ಬೈಕ್ ಚಲಾಯಿಸಿದ ಬೈಕ್ ಸವಾರರಿಗೆ ತಕ್ಕ ಪಾಠ ಕಲಿಸಿದ ಮಹಿಳೆಯರು Video

ರಾಜೀವ್ ಗಾಂಧಿ ಭದ್ರತೆ ಹಿಂಪಡೆಯಲಾಗಿತ್ತು, ಮುಂದಿನ ಬಾರಿ ತಂದೆಯ ಅಂತ್ಯಕ್ರಿಯೆಗೆ ಬರಬೇಕಾಗಬಹುದು ಎನಿಸಿತ್ತು: ರಾಹುಲ್ ಗಾಂಧಿ

ದಿಬ್ರುಗಢದಲ್ಲಿ ಚಿರತೆ ದಾಳಿ: ಲೈವ್ ವಿಡಿಯೋದಲ್ಲಿ ಸೆರೆಯಾದ ಘಟನೆ, ಎದ್ನೋ ಬಿದ್ನೋ ಎಂದು ಓಡಿದ ಜನ Video

ಮುಂದಿನ ಸುದ್ದಿ
Show comments