ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಭಾರೀ ಚರ್ಚೆಯಾಗುತ್ತಿರುವಾಗಲೇ ಇದೀಗ ಯಾರೆಲ್ಲಾ ಸಚಿವರ ಖಾತೆಗೆ ಕುತ್ತು ಬರಲಿದೆ ಇಲ್ಲಿದೆ ವಿವರ.
ಸಚಿವ ಸಂಪುಟ ವಿಸ್ತರಣೆ ಚರ್ಚೆಯಾಗುತ್ತಿರುವಾಗಲೇ ಕೆಲವು ಸಚಿವರು ಈಗಾಗಲೇ ನಾವು ಪದತ್ಯಾಗಕ್ಕೂ ಸಿದ್ಧ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸೂಚಿಸಿದರೆ ನಾವು ನಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಪ್ರಮುಖ ಸಚಿವರೇ ಘೋಷಿಸಿಕೊಂಡಿದ್ದಾರೆ.
ಆ ಪೈಕಿ ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಕೃಷ್ಣಭೈರೇಗೌಡ ಸಚಿವ ಸ್ಥಾನಕ್ಕೆ ಸಿದ್ಧ ಎಂದಿದ್ದಾರೆ. ಕೃಷ್ಣಭೈರೇಗೌಡ ಸಚಿವ ಸ್ಥಾನ ಕಳೆದುಕೊಳ್ಳುವ ಬಗ್ಗೆಯೂ ಮೊನ್ನೆಯೇ ಸೂಚನೆ ನೀಡಿದ್ದರು. ಇವರಲ್ಲದೆ ಕೆಎಚ್ ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಕೂಡಾ ಬಿಟ್ಟುಕೊಡಲು ತಯಾರಾಗಿದ್ದಾರೆ.
ಇದೀಗ ಹೊಸದಾಗಿ ಸಂಪುಟ ಸೇರ್ಪಡೆಯಾಗಲು ಶಾಸಕರ ದಂಡೇ ಕಾದಿದೆ. ಲಕ್ಷ್ಮಣ್ ಸವದಿ, ಕೆಎಚ್ ಮುನಿಯಪ್ಪ ಪುತ್ರಿ ರೂಪಕಲಾ, ಅಪ್ಪಾಜಿ ನಾಡಗೌಡ ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ.