ಉರುಸ್ ಸಡಗರದಿಂದ ಆಚರಣೆ

Webdunia
ಭಾನುವಾರ, 11 ನವೆಂಬರ್ 2018 (14:29 IST)
ರಾಮಸಮುದ್ರದಲ್ಲಿ "ಹಜರತ್ ಸೈಯದ್ ದಿಲ್ಬರ್ ದಿಲ್ಬಕ್ಷಾ ಖಾದರ್ ವಲಿ" ದರ್ಗಾದಲ್ಲಿ ಹಲವಾರು ಪವಾಡಗಳೊಂದಿಗೆ ಗಂಧದ ಉರುಸ್ ಅದ್ದೂರಿಯಾಗಿ ಜರುಗಿತು.

ಚಾಮರಾಜನಗರ ಪಟ್ಟಣದ  ರಾಮಸಮುದ್ರದಲ್ಲಿ "ಹಜರತ್ ಸೈಯದ್ ದಿಲ್ಬರ್ ದಿಲ್ಬಕ್ಷಾ ಖಾದರ್ ವಲಿ" ದರ್ಗಾದಲ್ಲಿ ಹಲವಾರು ಪವಾಡಗಳೊಂದಿಗೆ ಗಂಧದ ಉರುಸ್ ಅದ್ದೂರಿಯಾಗಿ ಜರುಗಿತು.

ದರ್ಗಾ ಆಡಳಿತ ಮಂಡಳಿಯಿಂದ ಪ್ರತಿ ವರ್ಷ ದಂತೆ ಈ ಬಾರಿಯೂ ಗಂಧದ ಉರುಸ್ ಆಚರಣೆ ಮಾಡಲಾಯಿತು. ಚಾಮರಾಜನಗರದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳು ಹಜರತ್ ರವರ ಕೃಪೆಗೆ ಪಾತ್ರರಾದರು. 

ಹಜರತ್ ರವರ ಅನುಯಾಯಿಗಳು ವಿವಿಧ ರೀತಿಯ ಪಾವಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ಇಲ್ಲಿಗೆ ಆಗಮಿಸಿದ್ದ  ಭಕ್ತರಿಗೆ ಊಟ ಹಾಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು. ಕವ್ವಾಲಿಯೊಂದಿಗೆ ಅದ್ದೂರಿಯಾಗಿ ನಡೆದ  ಗಂಧದ ಮೆರವಣಿಗೆ ಜನಮನ ಸೂರೆಗೊಂಡಿತು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಜಕಿಸ್ತಾನ: ರಸ್ತೆ ಅಪಘಾತದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

ರಾಹುಲ್ ಗಾಂಧಿ ಭೇಟಿ ಬಳಿಕ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ

10 ನಿಮಿಷಗಳ ಡೆಲಿವರಿ ಗಡುವಿಗೆ ಇನ್ಮುಂದೆ ಬ್ರೇಕ್‌, ಯಾಕೆ ಗೊತ್ತಾ

ರಾಹುಲ್ ಗಾಂಧಿ ಬಂದಾಗ ಡಿಕೆ ಶಿವಕುಮಾರ್ ಗೆ ಏನಾಯ್ತು

ಎಸ್ಐಆರ್, ವಿಬಿ ಜಿ ರಾಮ್ ಜಿ ಕುರಿತು ಬಿಜೆಪಿಯಿಂದ ಜಾಗೃತಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments