Select Your Language

Notifications

webdunia
webdunia
webdunia
webdunia

ಯುಪಿ, ಬಿಹಾರಿಗಳು ರಾಜ್ಯದಲ್ಲಿ ನಡೆಸ್ತಿದ್ದಾರೆ ಇಂಥ ವ್ಯಾಪಾರ: ಭಾರೀ ಪ್ರತಿಭಟನೆ

ಯುಪಿ, ಬಿಹಾರಿಗಳು ರಾಜ್ಯದಲ್ಲಿ ನಡೆಸ್ತಿದ್ದಾರೆ ಇಂಥ ವ್ಯಾಪಾರ: ಭಾರೀ ಪ್ರತಿಭಟನೆ
ಬೆಳಗಾವಿ , ಶನಿವಾರ, 5 ಅಕ್ಟೋಬರ್ 2019 (20:16 IST)
ಹೊರರಾಜ್ಯದಿಂದ ಬಂದು ಕರ್ನಾಟಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವವರ ಅಂಗಡಿ ಪರವಾಣಿಗೆಗಳನ್ನು ರದ್ದುಗೊಳಿಸಿ.

ಹೀಗಂತ ಆಗ್ರಹ ಮಾಡಲಾಗಿದೆ. ರಾಜ್ಯ ಹಡಪದ ಸಮಾಜದ ಹಿತಾಸಕ್ತಿ ಕಾಪಾಡಬೇಕೆಂದು ಬೆಳಗಾವಿ ಜಿಲ್ಲಾ ಹಡಪದ ಅಪ್ಪಣ್ಣ ಸೇವಾ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.

ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಕ್ಷೌರಿಕರು ( ಹಡಪದ ಅಪ್ಪಣ್ಣ ಸೇವಾ ಸಮಾಜದ ಬಂಧುಗಳು) ಉತ್ತರ ಪ್ರದೇಶ, ಬಿಹಾರ ಹಾಗೂ ಬಂಡವಾಳ ಶಾಹಿಗಳು ಕರ್ನಾಟಕಕ್ಕೆ ಬಂದು ಕ್ಷೌರಿಕ ವೃತ್ತಿಯನ್ನು ರಾಜ್ಯದಲ್ಲಿ ಪ್ರಾರಂಭಿಸಿದ್ದಾರೆ.

ಇದರಿಂದ  12ನೇ ಶತಮಾನದಿಂದಲೂ ಕ್ಷೌರಿಕ ವೃತ್ತಿಯ ಮೂಲಕ ಜೀವನ ಕಟ್ಟಿಕೊಂಡ ಹಡಪದ ಸಮಾಜದ ಮೇಲೆ ಪೆಟ್ಟು ಬೀಳುತ್ತಿದೆ. ಕೂಡಲೇ ಹೊರ ರಾಜ್ಯದ ಕ್ಷೌರಿಕರ ಅಂಗಡಿ ಪರವಾಣಿಗೆಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ರೋಗಕ್ಕೆ ಬೆಂಡಾದ ಅಡಿಕೆ ಬೆಳೆಗಾರರು