Publish Date: Sun, 13 Oct 2019 (14:50 IST)
Updated Date: Sun, 13 Oct 2019 (14:52 IST)
ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದಿದ್ದಾರೆ.
ಡಾ.ಜಿ.ಪರಮೇಶ್ವರ್ ಅವರೇ ಐಟಿ ದಾಳಿ ರಾಜಕೀಯ ಪ್ರೇರಿತವಾಗಿ ನಡೆದಿಲ್ಲ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಕೇಂದ್ರ ಮಂತ್ರಿ ಪ್ರಲ್ಹಾದ್ ಜೋಶಿ, ಐಟಿ ದಾಳಿ ಬಗ್ಗೆ ಕಾಂಗ್ರೆಸ್ ನವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ.
ಇಷ್ಟು ವರ್ಷ ದೇಶವನ್ನು ಕೊಳ್ಳೆ ಹೊಡೆದು ದರೋಡೆ ಮಾಡಿದ್ದಾರೆ. ಒಂದೊಂದಾಗಿ ಈಗ ಬಯಲಿಗೆ ಹಗರಣಗಳು ಬರ್ತಾ ಇವೆ ಅಂತ ವ್ಯಂಗ್ಯವಾಡಿದ್ದಾರೆ.
ಪರಮೇಶ್ವರ್ ಆಪ್ತ ರಮೇಶ್ ಪ್ರಕರಣ ತನಿಖೆ ಶುರುವಾಗಿದೆ. ತನಿಖೆ ನಂತರದಲ್ಲಿ ಸತ್ಯ ಹೊರಗೆ ಬರಲಿದೆ ಅಂದಿದ್ದಾರೆ.