Publish Date: Fri, 24 Jan 2020 (11:50 IST)
Updated Date: Fri, 24 Jan 2020 (11:53 IST)
ಬೆಂಗಳೂರು : ಬಿಜೆಪಿ ವಿರುದ್ಧ ನಿರುದ್ಯೋಗ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ನಾಯಕರು ಪ್ಲ್ಯಾನ್ ಮಾಡಿದ್ದು, ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ನಡೆಸುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ಪ್ಲ್ಯಾನ್ ಮಾಡಿರುವ ಕಾಂಗ್ರೆಸ್ ಮಿಸ್ಡ್ ಕಾಲ್ ಅಭಿಯಾನ ಶುರು ಮಾಡಿದೆ. ನಿರುದ್ಯೋಗಿಗಳು 81519 94411 ನಂ.ಗೆ ಮಿಸ್ಡ್ ಕಾಲ್ ಕೊಡುವ ಅಭಿಯಾನ ಮೂಲಕ ನಿರುದ್ಯೋಗಿಗಳ ನೋಂದಣಿ ಅಭಿಯಾನ ಆರಂಭಿಸಿದೆ.
ಮಿಸ್ಡ್ ಕಾಲ್ ಮೂಲಕ ದೇಶದ ನಿರುದ್ಯೋಗಿಗಳ ಮಾಹಿತಿ ಕಲೆಹಾಕಲು ಅಭಿಯಾನ ಶುರು ಮಾಡಿದ ಕಾಂಗ್ರೆಸ್ ಸಿಎಎ ಪರ ಬಿಜೆಪಿಯ ಮಿಸ್ಡ್ ಕಾಲ್ ಅಭಿಯಾನಕ್ಕೆ ಟಾಂಗ್ ನೀಡಿದೆ ಎನ್ನಲಾಗಿದೆ.