Publish Date: Tue, 20 Dec 2016 (12:40 IST)
Updated Date: Tue, 20 Dec 2016 (12:43 IST)
ಮಾಜಿ ಭೂಗತ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರು ನಿನ್ನೆ ಅನುರಾಧಾ ಎನ್ನುವವರನ್ನು ಎರಡನೇ ವಿವಾಹವಾಗಿದ್ದಾರೆ.
ನಿನ್ನೆ ಬಿಡದಿಯ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆದ ಸರಳ ವಿವಾಹದಲ್ಲಿ ಮುತ್ತಪ್ಪ ರೈ ಅವರು ಅನುರಾಧಾ ಅವರನ್ನು ವರಿಸಿದರು.
ಮುತ್ತಪ್ಪ ರೈ ಅವರ ಮೊದಲ ಪತ್ನಿ ರೇಖಾ ಅವರು 2013ರಲ್ಲಿ ನಿಧನರಾಗಿದ್ದರು. ಈ ದಂಪತಿಗೆ ರಿಕ್ಕಿ ರೈ ಹಾಗೂ ರಾಕಿ ರೈ ಎಂಬ ಇಬ್ಬರು ಮಕ್ಕಳಿದ್ದಾರೆ. ಇದೀಗ, ಮುತ್ತಪ್ಪ ರೈ ಅವರು ಅನುರಾಧಾ ಎನ್ನುವವರನ್ನು ಎರಡನೇ ವಿವಾಹವಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ