Publish Date: Sat, 19 Sep 2020 (22:53 IST)
Updated Date: Sat, 19 Sep 2020 (22:56 IST)
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಸಿಎಂ ಬದಲಾವಣೆ ವಿಷಯ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಈ ನಡುವೆ ಯಾರೆಲ್ಲಾ ಸಚಿವರಾಗಬಹುದು ಎನ್ನೋದನ್ನು ಸಚಿವ ರಮೇಶ್ ಜಾರಕಿಹೊಳಿ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅಥವಾ ಎಂಟಿಬಿ ನಾಗರಾಜ್ ರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಬೇಕು ಎಂದಿದ್ದಾರೆ.
ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನ ಪಡೆದುಕೊಂಡು ಮಂತ್ರಿ ಆಗಬಹುದು. ಹಾಗಾದ್ರೆ ತಾವು ಸಂತಸ ಪಡೋದಾಗಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದು, ಈ ಕುರಿತು ಸಿಎಂ ಮತ್ತು ಹೈಕಮಾಂಡ್ ಕ್ರಮ ಕೈಗೊಳ್ಳುತ್ತೆ ಎಂದಿದ್ದಾರೆ.