Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನ 20 ರಿಂದ 25 ಶಾಸಕರು ಬಿಜೆಪಿಗೆ ಬರಲಿದ್ದಾರೆ- ಉಮೇಶ್ ಜಾಧವ್

ಕಲಬುರಗಿ
ಕಲಬುರಗಿ , ಬುಧವಾರ, 22 ಮೇ 2019 (11:55 IST)
ಕಲಬುರಗಿ : ಕಾಂಗ್ರೆಸ್ ನ ವಿರುದ್ಧ ಸಿಡಿದೆದ್ದ ರೋಷನ್ ಬೇಗ್ ಸೇರಿದಂತೆ 20 ರಿಂದ 25 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.




ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ಇದೆ. ಇದರಿಂದ ಇವಿಎಂ ಯಂತ್ರದ ಮೇಲೆ ಆರೋಪ ಹೊರಿಸೋಕೆ ಮುಂದಾಗಿದ್ದಾರೆ. ಅದರ ಅರ್ಥ ಬಿಜೆಪಿ ಗೆಲ್ಲಲಿದೆ, ಕಾಂಗ್ರೆಸ್ ಸೋಲಲಿದೆ ಅನ್ನೋ ಲೆಕ್ಕದಲ್ಲಿ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.


ಹಾಗೇ ಕಲಬುರಗಿ ಕ್ಷೇತ್ರದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಚಿಂಚೋಳಿ ಉಪಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿರುವುದು ನೋಡಿದರೆ ಕಾಂಗ್ರೆಸ್ ಗೆ ಸೋಲು ಖಚಿತ ಅನಿಸುತ್ತಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಂದೋಬಸ್ತ್ ಕೈಗೊಂಡಿದ್ದಾರೆ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ಆಶ್ರಮದ ಗೋದಾಮಿಗೆ ನುಗ್ಗಿದ ಕಾಮುಕ ಮಾಡಿದ್ದೇನು ಗೊತ್ತಾ?