Publish Date: Wed, 24 Jan 2018 (19:18 IST)
Updated Date: Wed, 24 Jan 2018 (19:22 IST)
ದೀಕ್ಷೆ ಕೊಟ್ಟ ಗುರುವಿಗೆ ಅಪಘಾತವಾದ ಸುದ್ದಿ ಕೇಳಿ ಕೇಂದ್ರ ಸಚಿವ ಉಮಾ ಭಾರತಿ ಅವರು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಉಮಾಭಾರತಿ ಅವರು ಪೇಜಾವರ ಮಠಕ್ಕೆ ಬಂದು ಅಪಘಾತದ ಮಾಹಿತಿ ಪಡೆದುಕೊಂಡರು. ಸ್ವಾಮೀಜಿಯನ್ನು ಕಂಡು ನಿಟ್ಟಿಸುರು ಬಿಟ್ಟ ಅವರು, ಸ್ವಾಮೀಜಿ ಅವರನ್ನು ಆರೋಗ್ಯದ ಬಗ್ಗೆ ಗಮನ ಹರಿಸಲು ಸಲಹೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಅವರಿಗೆ ಅಪಘಾತವಾಗಿರುವುದು ಕೇಳಿ ಆಘಾತಗೊಂಡು, ಕೆಲಸವನ್ನೆಲ್ಲ ಬದಿಗೊತ್ತಿ ಬಂದು ಸ್ವಾಮೀಜಿಯನ್ನು ನೋಡಿ ನಿರಾಳವಾಗಿದ್ದೇನೆ. ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದ್ದು, ವೈದ್ಯರ ಸೂಚನೆ ಪಾಲಿಸಲು ಸ್ವಾಮೀಜಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.