Udupi: ದೇವರ ಹಣ ಕದ್ದವನ ದೈವವೇ ಹುಡುಕಿಕೊಟ್ಟಿತು

Krishnaveni K
ಶನಿವಾರ, 13 ಜುಲೈ 2024 (10:25 IST)
ಉಡುಪಿ: ದೇವರ ದುಡ್ಡಿಗೇ ಕೈ ಹಾಕಿದ ಕಳ್ಳನನ್ನು ದೈವವೇ ಹಿಡಿದುಕೊಟ್ಟ ಪವಾಡ ಸದೃಶ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಮೂಲಕ ಮತ್ತೊಮ್ಮೆ ದೈವ ಎಷ್ಟು ಕಾರಣಿಕ ಎಂದು ತೋರಿಸಿಕೊಟ್ಟಿದೆ.

ಕರಾವಳಿಗರು ಏನೇ ತೊಂದರೆಗಳಾದರೂ ಮೊದಲು ಹೋಗುವುದು ದೈವದ ಬಳಿ. ದೈವದ ಬಳಿ ತಮ್ಮ ಸಂಕಷ್ಟಗಳನ್ನುಹೇಳಿಕೊಂಡು ಪರಿಹಾರ ಕೊಡಿಸುವಂತೆ ಕೇಳಿಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಕಳ್ಳತನ, ಶತ್ರುಬಾಧೆ ವಿಚಾರವಾಗಿ ದೈವದ ಮೊರೆ ಹೋಗುವುದು ಸಾಮಾನ್ಯ.

ಇದೀಗ ಉಡುಪಿಯ ಬಬ್ಬು ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೂ ದೈವದ ಮೊರೆ ಹೋಗಲಾಗಿತ್ತು. ದೇವಾಲಯದ ಕಾಣಿಕೆ ಹುಂಡಿ ಒಡೆದು ಹಣ ಕಳ್ಳತನ ಮಾಡಲಾಗಿತ್ತು. ಇದರ ಬಗ್ಗೆ ದೈವದ ಬಳಿ ಭಕ್ತರೊಬ್ಬರು ಕಳ್ಳನನ್ನು ಹುಡುಕಿಸಿಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ದೈವ 24 ಗಂಟೆಯೊಳಗೆ ಹುಡುಕಿಸಿ ಕೊಡುವುದಾಗಿ ಅಭಯ ನೀಡಿತ್ತು.

ಕಳ್ಳತನ ಮಾಡಿದ ದೃಶ್ಯವನ್ನು ಸಿಸಿಟಿವಿಯಲ್ಲಿ ಗಮನಿಸಿದಾಗ ಕಳ್ಳನ ಚಹರೆ ಪತ್ತೆಯಾಗಿತ್ತು. ಆತನನ್ನೇ ಹೋಲುವ ವ್ಯಕ್ತಿ ಬಸ್ ನಿಲ್ದಾಣದಲ್ಲಿ ನಿದ್ರೆ ಮಾಡುತ್ತಿದ್ದುದನ್ನು ಸ್ಥಳೀಯ ಆಟೋ ಚಾಲಕರು ಗುರುತಿಸಿ ಹಿಡಿದುಕೊಟ್ಟಿದ್ದಾರೆ. ಈ ಮೂಲಕ ಕಳ್ಳತನ ನಡೆದ 24 ಗಂಟೆಯೊಳಗೆ ದೈವದ ಅಭಯದಿಂದ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚುನಾವಣಾ ಆಯೋಗಕ್ಕೂ ಅಂಕುಶವಿರಬೇಕು ಎಂಬ ರಾಹುಲ್ ಗಾಂಧಿ ಅಭಿಪ್ರಾಯ ಒಪ್ಪುತ್ತೀರಾ

ನಾನೇನು ಮಾತನಾಡಬೇಕೆಂದು ನಾನು ನಿರ್ಧರಿಸುತ್ತೇನೆ: ರಾಹುಲ್ ಗಾಂಧಿ ಬೆವರಿಳಿಸಿದ ಅಮಿತ್ ಶಾ Video

ಸಿಎಂ ಬದಲಾವಣೆ ಬಗ್ಗೆ ಬೆಳಗಾವಿಯಲ್ಲೇ ನಡೆಯಿತು ಮಹತ್ವದ ವಿದ್ಯಮಾನ

ಚರ್ಚೆಗೆ ಬನ್ನಿ ಎಂದು ಅಮಿತ್ ಶಾಗೆ ಸವಾಲು ಹಾಕಿ ರಾಹುಲ್ ಗಾಂಧಿ ವಿದೇಶಕ್ಕೆ ಹೋದರೆ ಹೇಗೆ

Karnataka Weather: ತಾಪಮಾನದಲ್ಲಿ ಮತ್ತಷ್ಟು ಇಳಿಕೆ, ಹವಾಮಾನ ವರದಿ ಗಮನಿಸಿ

ಮುಂದಿನ ಸುದ್ದಿ
Show comments