Publish Date: Sun, 17 Nov 2024 (13:22 IST)
Updated Date: Sun, 17 Nov 2024 (13:25 IST)
ಮಂಗಳೂರು: ಖಾಸಗಿ ರೆಸಾರ್ಟ್‌ಗೆ ಟ್ರಿಪ್‌ಗೆ ಬಂದಿದ್ದ ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲದಲ್ಲಿ ನಡೆದಿದೆ.
ಮೃತರನ್ನು ಮೈಸೂರು ಮೂಲಕದ ಎಂಜಿನಿಯರ್ ವಿದ್ಯಾರ್ಥಿಗಳಾದ ನಿಶಿತ ಎಂಡಿ21, ಪಾರ್ವತಿ ಎಸ್ 20. ಹಾಗೂ ಕೀರ್ತನಾ ಎನ್ 21 ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಬೀಚ್ ರೆಸಾರ್ಟ್‌ಗೆ ಆಗಮಿಸಿದ ಮೂವರು ಯುವತಿಯರು ಕೊಠಡಿ ಪಡೆದಿದ್ದರು.
ಇಂದು ಬೆಳಗ್ಗೆ 8.30ರ ಸುಮಾರಿಗೆ ಈಜಲೆಂದು ಈಜುಕೊಳಕ್ಕೆ ತೆರಳಿದ್ದು, ಈ ವೇಳೆ ಮೂವರು ಈಜು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತ್ತು. ಈ ವೇಳೆ ಆಯತಪ್ಪಿ ಓರ್ವ ಯುವತಿ ಮುಳುಗಿರುವ ಸಾಧ್ಯತೆ ಇದೆ. ಆಕೆಯ ರಕ್ಷಣೆಗೆ ತೆರಳಿದ್ದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.