Select Your Language

Notifications

webdunia
webdunia
webdunia
webdunia

ಆಧಾರ್‌ ಕಾರ್ಡ್‌ ಉಚಿತ ಅಪ್ಡೇಟ್‌ಗೆ ಎರಡೇ ದಿನ ಬಾಕಿ

Aadhaar card
ಶುಲ್ಕ ರಹಿತವಾಗಿ ಆಧಾರ್ ಕಾರ್ಡ್ ನವೀಕರಣಕ್ಕೆ ಇನ್ನು ಮೂರು ದಿನ ಮಾತ್ರ ಅವಕಾಶ. ಡಿಸೆಂಬರ್ 14ರವರೆಗೆ ಉಚಿತ ಅಪ್ಡೇಟ್‌ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಈ ವರೆಗೆ ಆನ್‌ಲೈನ್ ಆಧಾರ್ ನವೀಕರಣಕ್ಕೆ ರೂ. 50ರ ಸಾಮಾನ್ಯ ಶುಲ್ಕವನ್ನು ನಿಗದಿ ಪಡಿಸಲಾಗಿತ್ತು.

ಈ ಅವಧಿಯಲ್ಲಿ ಆಧಾರ್ ಕಾರ್ಡ್​ ನಲ್ಲಿ ತಪ್ಪಾಗಿ ನಮೂದಾಗಿರುವ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ಸರಿಪಡಿಸಿ ನವೀಕರಿಸಬಹುದು. ಡಿಸೆಂಬರ್ 14ರ ಬಳಿಕ ಶುಲ್ಕ ಪಾವತಿಸಿ ಅಪ್ಡೇಟ್‌ ಮಾಡಿಕೊಳ್ಳಬಹುದು.

ಇದರ ಜೊತೆಗೆ ಮಕ್ಕಳ ಆಧಾರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, 15 ವರ್ಷ ವಯಸ್ಸಾದ ಮಕ್ಕಳ ಆಧಾರ್ ನವೀಕರಣಕ್ಕಾಗಿ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕು. ಎಂದು ಸೂಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಯೊಂದಿಗೆ ಪತ್ನಿಯ ಚಕ್ಕಂದ: ಅಡ್ಡಿಯಾಗಿದ್ದ ಪತಿ ಮಟಾಶ್