ಹೆಣ್ಣು ಮಕ್ಕಳಿಬ್ಬರಿಗೆ ವಿಷ ಕುಡಿಸಿ ಕೊಲೆ‌ ಪ್ರಯತ್ನ

Webdunia
ಸೋಮವಾರ, 7 ಆಗಸ್ಟ್ 2023 (21:00 IST)
ಹೆಣ್ಣು ಮಕ್ಕಳಿಬ್ಬರಿಗೆ ವಿಷ ಕುಡಿಸಿ ಕೊಲೆ‌ಪ್ರಯತ್ನಕ್ಕೆ ಯತ್ನಿಸಿರೋ  ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಕಳೆದ ಮಂಗಳವಾರ ದೇವನಹಳ್ಳಿಯ ದೊಡ್ಡಸಣ್ಣೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮದ ವಾಸಿಯಾಗಿರೋ ಶಿಲ್ಪ ಮತ್ತು ಅಶೋಕ ಕೆಲಸಕ್ಕೆ ಹೋಗಿದ್ದಾಗ ಮುಂಜಾನೆ ಆರು ಗಂಟೆಗೆ ಮನೆಗೆ ಮುಸುಕು ಧರಿಸಿ ಬಂದಿದ್ದ ಅನಾಮಿಕ‌ ವ್ಯಕ್ತಿ 13ವರ್ಷದ ಪಲ್ಲವಿಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ. ಮಗಳನ್ನು ಆಸ್ಪತ್ರೆಗೆ ಸೇರಿಸಿ ಕುಟುಂಬ ನೋವಿನಲ್ಲಿ ಇರುವಾಗ್ಲೆ ಎರಡು ನಂತರ ಅಂದ್ರೆ ಗುರುವಾರ ಮತ್ತೊಬ್ಬ ಮಗಳಾದ 15ವರ್ಷದ ಅನುಷಾಗೆ ಮತ್ತೆ ಅದೇ ಮುಸುಕುದಾರಿ ಬಂದು ವಿಷ ಕುಡಿಸಿದ್ದಾನೆ.‌ ಇದಕ್ಕೆ ಅನುಷ ಪ್ರತಿರೋಧ ವ್ಯಕ್ತಪಡಿಸಿದಾಗ ಎಡಗೈಗೆ ಚಾಕು ಇರಿದು ವಿಷ ಕುಡಿಸಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಆದ್ರೆ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳೂ ಮೂಡಿದೆ. ಯಾಕಂದ್ರೆ ಎರಡನೇ ಬಾರಿ ಅನುಷಾಳಿಗೆ ವಿಷ ಕುಡಿಸುವಾಗ ಮೊದಲು ನೀಡಿದ ಎಫ್ ಐ ಆರ್ ವಾಪಸ್ ಪಡೆಯುವಂತೆ ಬೆದರಿಸಿ ವಿಷ ಕುಡಿಸಿರೋದಾಗಿ ಆರೋಪಿಸಲಾಗಿದೆ‌. ಇನ್ನೂ     ಅನುಷ ಮತ್ತು ಪಲ್ಲವಿ ಇಬ್ರು ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿದ್ದು ಒಂದೇ ಗ್ರಾಮದಲ್ಲಿ ವಾಸ ಮಾಡ್ತಿದ್ರು. ಘಟನೆ ಕುರಿತು ದೇವನಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

ಬೆಳಗಾವಿ: ಮನೆಯಿಂದ ಕೊಳೆತ ವಾಸನೆ, ಬಾಗಿಲು ತೆರೆದಾಗ ಮಾಜಿ ಪತಿ ಪೊಲೀಸಪ್ಪನ ಕೃತ್ಯ ಬಟಾಬಯಲು

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಮುಂದಿನ ಸುದ್ದಿ
Show comments