Select Your Language

Notifications

webdunia
webdunia
webdunia
webdunia

ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳು ದುರ್ಮರಣ

Chikkaballapura Agricultural Pit
ಚಿಕ್ಕಬಳ್ಳಾಪುರ: ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ  ತೊಗರಿ ಘಟ್ಟ ಗ್ರಾಮದಲ್ಲಿ ನಡೆದಿದೆ.

ಸವಿತಾ ಮುನಿರಾಜು ದಂಪತಿಯ ಮಗಳು ದಕ್ಷ (11) ಹಾಗೂ ಆಶಾ- ಪ್ರದೀಪ್ ದಂಪತಿಯ ಮಗ ಧನುಷ್ (4) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. 

ಇಬ್ಬರು ಕೃಷಿ ಹೊಂಡದ ಬಳಿ ಆಟವಾಡಲು ತೆರಳಿದ್ದರು. ಈ ವೇಳೆ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. 

ಕೃಷಿ ಹೊಂಡಕ್ಕೆ ಸೂಕ್ತ ಬೇಲಿ ನಿರ್ಮಿಸದ ಕಾರಣ ಮಾಲೀಕ ಗುರುಮೂರ್ತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹತ್ಯೆಯಾದ 3 ತಿಂಗಳ ಬಳಿಕ ಇರಾನ್ ನಾಯಕ ಖಮೇನಿ ಶವಸಂಸ್ಕಾರಕ್ಕೆ ಡೇಟ್ ಫಿಕ್ಸ್‌, ಮಗಳು, ಆಳಿಯನ ಶವಸಂಸ್ಕಾರ ಯಾವಾಗ ಗೊತ್ತಾ