Select Your Language

Notifications

webdunia
webdunia
webdunia
webdunia

ಚೆನ್ನೈ‌ನಿಂದ ಚಿನ್ನಮ್ಮನ ನೋಡಲು ಬಂದ ದಿನಕರನ್

ಚೆನ್ನೈ‌ನಿಂದ ಚಿನ್ನಮ್ಮನ ನೋಡಲು ಬಂದ ದಿನಕರನ್
ಬೆಂಗಳೂರು , ಸೋಮವಾರ, 5 ಜೂನ್ 2017 (16:23 IST)
ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿ ಪರಪ್ಪನ ಜೈಲಿನಲ್ಲಿರುವ ವಿ.ಕೆ.ಶಶಿಕಲಾರನ್ನು ಭೇಟಿ ಮಾಡಲು ಸೋದರ ಸಂಬಂಧಿ ಟಿಟಿವಿ.ದಿನಕರನ್ ನಗರಕ್ಕೆ ಆಗಮಿಸಿದ್ದಾರೆ.
 
ದಿನಕರನ್ ತಮ್ಮ 10 ಶಾಸಕರೊಂದಿಗೆ ಪರಪ್ಪನ ಜೈಲಿಗೆ ಆಗಮಿಸಿ ಶಶಿಕಲಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ತಮಿಳುನಾಡಿನಲ್ಲಿ ನಿರಂತರವಾಗಿ ರಾಜಕೀಯ ಬೆಳವಣಿಗೆಗಳಾಗುತ್ತಿರುವ ಹಿನ್ನೆಲೆಯಲ್ಲಿ ದಿನಕರನ್, ಶಶಿಕಲಾ ಅವರೊಂದಿಗೆ 10 ಶಾಸಕರು ರಹಸ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
 
ಮಾಜಿ ಸಿಎಂ ದಿವಂಗತ ಜಯಲಲಿತಾ ಕಟ್ಟಾ ಬೆಂಬಲಿಗ ಪನ್ನೀರ್ ಸೆಲ್ವಂ, ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಮತ್ತು ಅವರ ಬೆಂಬಲಿಗರನ್ನು ಉಚ್ಚಾಟಿಸಿದಲ್ಲಿ ಮಾತ್ರ ಮೈತ್ರಿಗೆ ಸಿದ್ದ ಎಂದು ಘೋಷಿಸಿರುವುದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಮತ್ತು ಶಶಿಕಲಾ ಬೆಂಬಲಿಗರಲ್ಲಿ ತಳಮಳ ಮೂಡಿಸಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೂಜಾಟದಲ್ಲಿ 2000 ಕೋಟಿ ಹಣದ ಜೊತೆ ಐವರು ಪತ್ನಿಯರನ್ನೂ ಕಳೆದುಕೊಂಡ ದುಬೈ ಯುವರಾಜ..?