ಬಜೆಟ್‌ಗೂ ಮುನ್ನ ಸರ್ಕಾರಕ್ಕೆ ಬೇಡಿಕೆಗಳ ಸುರಿಮಳೆ ಶುರುವಾಗಿದ್ದು, ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮತ್ತೆ ಸಾರಿಗೆ ನೌಕರರು ರಸ್ತೆಗಿಳಿಯಲಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ಇಲಾಖೆಯ 4 ನಿಗಮಗಳ ನೌಕರರಿಂದ ನಾಳೆ ಫ್ರೀಡಂಪಾರ್ಕ್‌ನಲ್ಲಿ ಕುಟುಂಬ ಸಮೇತ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದ್ದು, ಈ ಹೋರಾಟದಲ್ಲಿ ಸಾವಿರಾರು ನೌಕರರು ಭಾಗಿಯಾಗಲಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳೇನು ಅನ್ನುವುದನ್ನ ನೋಡುವುದಾದರೆ ದಿನಾಂಕ ಜ.1 2020ರಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಬಾಕಿ ಇದ್ದು, ಕೂಡಲೆ ವೇತನ ಹೆಚ್ಚಳ ಮಾಡುವುದು. ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರುನೇಮಕಾತಿ ಮಾಡಿಕೊಳ್ಳುವುದು. ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು. ಒಟ್ಟಾರೆ ನಾಳೆ ಫ್ರೀಡಂಪಾರ್ಕ್‌ನಲ್ಲಿ ಕುಟುಂಬ ಸಮೇತ ಸಾರಿಗೆ ನೌಕರರ ಭಾಗಿಯಾಗಲಿದ್ದಾರೆ . ಇನ್ನು ಇವರ ಹೋರಾಟ ಎಷ್ಷು ದಿನ ಇರಲಿದೆ ಕಾದು ನೋಡ ಬೇಕಿದೆ