Select Your Language

Notifications

webdunia
webdunia
webdunia
Tuesday, 8 April 2025
webdunia

ಹಿಜಾಬ್​ಗೆ ಅವಕಾಶ ನೀಡಿದವರ ವರ್ಗಾವಣೆ

ಹಿಜಾಬ್​
bangalore , ಮಂಗಳವಾರ, 29 ಮಾರ್ಚ್ 2022 (16:46 IST)
ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಸಿ ಬರಲು ಅವಕಾಶ ನೀಡಿದ ಪ್ರಕರಣದ ಹಿನ್ನಲೆ, ಪರೀಕ್ಷಾ ಮುಖ್ಯ ಅಧೀಕ್ಷಕರ ಬದಲಾವಣೆ ಮಾಡಲಾಗಿದೆ. ಗದಗ ಸಿಎಸ್ ಪಾಟೀಲ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಬದಲಾವಣೆ ಮಾಡಿ ಡಿಡಿಪಿಐ ಬಸವಲಿಂಗಪ್ಪ ಆದೇಶ ಹೊರಡಿಸಿದ್ದಾರೆ. ನಿನ್ನೆ ನಡೆದ SSLC ಪರೀಕ್ಷೆಗೆ ಹಿಜಾಬ್ ಧರಿಸಿ ಬರಲು ಅಧಿಕಾರಿಗಳು ಅವಕಾಶ ನೀಡಿದ್ದರು. ಪರೀಕ್ಷೆ ಆರಂಭವಾಗುತ್ತಿದ್ದಂತೆ ಎಚ್ಚೆತ್ತು ಹಿಜಾಬ್ ತೆಗೆಸಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು. ಪರೀಕ್ಷಾ ಸಮಯದಲ್ಲಿ ಲೋಪ ಎಸಗಿದ ಪರೀಕ್ಷಾ ಮುಖ್ಯಸ್ಥ ಕೆವಿ ಭಜಂತ್ರಿ, ಬಿಎಸ್ ಹೊನಗುಡಿ ಬದಲಾವಣೆ ಮಾಡಲಾಗಿದೆ. ಅವರ ಜಾಗದಲ್ಲಿ ಎಸ್ ಕೆ ಹವಾಲ್ದಾರ್, ಕೆ.ವೈ.ವಿಭೂತಿ ಅವರ ನಿಯೋಜನೆ ಮಾಡಿ ಆದೇಶಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

CMಗೆ ಪ್ರಗತಿಪರ ಚಿಂತಕರಿಂದ ಪತ್ರ