ರೈಲುಹಳಿ ತಪ್ಪಿ ಅಪಘಾತ

Webdunia
ಭಾನುವಾರ, 3 ಏಪ್ರಿಲ್ 2022 (19:53 IST)
ಮಹಾರಾಷ್ಟ್ರದ ನಾಸಿಕ್ ಬಳಿ ಭಾನುವಾರ ರೈಲು ಅಪಘಾತ ಸಂಭವಿಸಿದೆ. ಜಯನಗರ ಎಕ್ಸ್‌ ಪ್ರೆಸ್‌ ನ ಕೆಲವು ಕೋಚ್‌ಗಳು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಡೌನ್‌ ಲೈನ್‌ ನಲ್ಲಿ ನಾಸಿಕ್ ಬಳಿಯ ಲಹ್ವಿತ್ ಮತ್ತು ದೇವ್‌ ಲಾಲಿ ನಡುವೆ ಹಳಿತಪ್ಪಿದವು.
 
ಅಪಘಾತದಲ್ಲಿ ಒಬ್ಬರು ಸಾವು ಕಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇಂದ್ರ ರೈಲ್ವೆಯ ಸಿಪಿಆರ್‌ಒ ಈ ಮಾಹಿತಿ ನೀಡಿದ್ದು, ಅಪಘಾತ ವರದಿಯಾದ ಕೂಡಲೇ ಅಪಘಾತ ಪರಿಹಾರ ರೈಲು ಮತ್ತು ವೈದ್ಯಕೀಯ ವ್ಯಾನ್ ಸ್ಥಳಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
 
ಮಾಹಿತಿ ಪ್ರಕಾರ, ಜಯನಗರ ಎಕ್ಸ್‌ ಪ್ರೆಸ್ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ ನಿಂದ ನಾಸಿಕ್‌ ಗೆ ಬೆಳಗ್ಗೆ 11.30ಕ್ಕೆ ಹೊರಟಿತ್ತು. ಮಧ್ಯಾಹ್ನ 3 ಗಂಟೆಗೆ ದೇವ್ಲಾಲಿ(ನಾಸಿಕ್ ಬಳಿ) ತಲುಪಿದಾಗ, ಡೌನ್ ಲೈನ್ ರೈಲಿನ 10 ಬೋಗಿಗಳು ಹಳಿತಪ್ಪಿದವು. ಘಟನೆ ಬಳಿಕ ಸ್ಥಳದಲ್ಲಿ ಅಪಾರ ಜನ ಜಮಾಯಿಸಿದ್ದಾರೆ.
 
ಜಯನಗರ ಎಕ್ಸ್‌ ಪ್ರೆಸ್ ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಿದ್ದು, ಕೆಲ ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಸೆಂಟ್ರಲ್ ರೈಲ್ವೇ ಸಿಪಿಆರ್‌ಒ ಪ್ರಕಾರ, ಮೂರು ರೈಲುಗಳನ್ನು ರದ್ದುಗೊಳಿಸಲಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶದ ಶ್ರೀಮಂತ ನಾಗರಿಕ ಪರಂಪರೆ ಬಗ್ಗೆ ರಾಜನಾಥ ಸಿಂಗ್ ಶ್ಲಾಘನೆ

ಬಳ್ಳಾರಿ ಗಲಭೆ ಪ್ರಕರಣ, ಜನಾರ್ಧನ ರೆಡ್ಡಿ ಮನೆಯಲ್ಲಿ ಮತ್ತೊಂದು ಬುಲೆಟ್ ಪತ್ತೆ

ಬಳ್ಳಾರಿ ಶೂಟೌಟ್‌, ಮುಂದಿನ ದಿನಗಳಲ್ಲಿ ಇದಕ್ಕಿಂದ ವಿಜೃಂಭಣೆಯಿಂದ ಪುತ್ಥಳಿ ಅನಾವರಣ

ಅಕ್ರಮ ಹಣ ವರ್ಗಾವಣೆ, ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಪಟೇಲ್ ಅರೆಸ್ಟ್‌

ಬಳ್ಳಾರಿ ಶೂಟೌಟ್ ಪ್ರಕರಣ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಮಧುಬಂಗಾರಪ್ಪ

ಮುಂದಿನ ಸುದ್ದಿ
Show comments