Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಟ್ರಾಫಿಕ್ ಇಳಿಮುಖ

Webdunia
ಗುರುವಾರ, 10 ಫೆಬ್ರವರಿ 2022 (18:01 IST)
ವಾಹನ ಸಂಚಾರ ದಟ್ಟಣೆಗೆ ಹೆಸರಾಗಿದ್ದ ಬೆಂಗಳೂರಿನಲ್ಲಿ 2021ರ ಸಾಲಿನಲ್ಲಿ ಶೇ. 32ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ!
 
ಹೌದು, ಈ ಕುರಿತು ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆಯಾದ 'ಟಾಮ್ ಟಾಮ್' ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಹಿಂದೆಂದಿಗಿಂತಲೂ ವಾಹನ ದಟ್ಟಣೆಯಲ್ಲಿ ಇಳಿಮುಖ ಕಂಡಿದೆ ಎಂದು ಅಧ್ಯಯನದ ಮೂಲಕ ಅಂಕಿ ಅಂಶ ನೀಡಿದೆ.
ಟಾಮ್ ಟಾಮ್ ಸಂಸ್ಥೆಯು ವಿಶ್ವದ ಪ್ರಮುಖ 404 ಮಹಾನಗರಗಳಲ್ಲಿನ ಭೌಗೋಳಿಕ ಅನ್ವೇಷಣೆ ನಡೆಸಿ, ಅಲ್ಲಿನ ಸಂಚಾರ ದಟ್ಟಣೆ ಬಗ್ಗೆ ಪ್ರತಿ ವರ್ಷ ವರದಿ ಬಿಡುಗಡೆ ಮಾಡುತ್ತದೆ. 11ನೇ ಆವೃತ್ತಿಯಾಗಿ ಬಿಡುಗಡೆ ಮಾಡಿರುವ 2021ರ ವರದಿಯ ಪ್ರಕಾರ ಬೆಂಗಳೂರು ವಾಹನ ಸಂಚಾರ ದಟ್ಟಣೆಯು ಶೇ.31ರಷ್ಟು ಕಡಿಮೆಯಾಗಿದೆ. 2019ರಲ್ಲಿ 6ನೇ ಸ್ಥಾನದಲ್ಲಿದ್ದ ಬೆಂಗಳೂರು 2021ರಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.
 
ಇನ್ನು ಮುಂಬೈ 5ನೇ ಸ್ಥಾನ ಪಡೆದುಕೊಂಡಿದ್ದರೆ, ನವದೆಹಲಿ 11 ಹಾಗೂ ಪುಣೆ 21ನೇ ಸ್ಥಾನಕ್ಕೆ ತಲುಪಿದೆ.
 
ಕೋವಿಡ್ ಸಾಂಕ್ರಮಿಕದಿಂದ ಕಂಪನಿ, ಶಾಲಾ ಕಾಲೇಜುಗಳು ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ಕ್ಲಾಸ್ ಮೊರೆ ಹೋದ ಕಾರಣ ರಸ್ತೆಯಲ್ಲಿ ವಾಹನ ಸಂಚಾರ ತೀರ ಇಳಿಮುಖವಾಗಿದೆ. ಆದರೆ, ಅಕ್ಟೋಬರ್ 9ರಂದು ಬೆಂಗಳೂರಿನಲ್ಲಿ ಹೆಚ್ಚು ಮಳೆಯಾದ ಕಾರಣ, ಆ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಿನ ಮಟ್ಟದಲ್ಲಿ ವರದಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸದನದಲ್ಲಿ ಕೈ, ಬಿಜೆಪಿ ಜಟಾಪಟಿ, ಇತ್ತ ತಮಾಷೆ ಮಾತಿನಲ್ಲಿ ತೊಡಗಿದ ಪ್ರಧಾನಿ ಮೋದಿ, ಖರ್ಗೆ, ರಾಹುಲ್, ವಿಡಿಯೋ ಅಸಲಿಯತ್ತು ಬೇರೆನೇ

ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಮೇಲೆ ಒಂಟಿ ಆನೆಯೊಂದು ಹೇಗೆ ಅಟ್ಟಾಡಿಸಿಕೊಂಡು ಬಂತು ನೋಡಿ, Video

ಖರೀದಿಗಾಗಿ ಮನೆ ನೋಡಲು ಹೋದ ದಂಪತಿ ಮೇಲೆ ಪಿಟ್ಬುಲ್‌ ಅಟ್ಯಾಕ್‌, ನಾಲ್ವರು ರಕ್ಷಣೆಗೆ ಬಂದರೂ ನಾಯಿ ಕಚ್ಚುವುದು ನಿಲ್ಲಿಸಲಿಲ್ಲ, ಭಯಾನಕ ವಿಡಿಯೋ

ಮುಂಬೈ: ಗೌಸಿಯಾ ಚಾಲ್‌ನಲ್ಲಿ ಭೂಕುಸಿತದಲ್ಲಿ ಮೃತರ ಸಂಖ್ಯೆ 7ಕ್ಕೆ ಏರಿಕೆ, ನಾಲ್ವರಿಗೆ ಗಾಯ

ತಮಿಳುನಾಡು ಕಾವೇರಿ ನೀರು ಹಂಚಿಕೆ, ಸುಪ್ರೀಂ ತೀರ್ಪಿನ ಅನುಸಾರ ನಿರ್ಧಾರ

ಮುಂದಿನ ಸುದ್ದಿ
Show comments