Publish Date: Sat, 17 Nov 2018 (18:58 IST)
Updated Date: Sat, 17 Nov 2018 (19:01 IST)
ಕೇಂದ್ರ ಬರ ಅಧ್ಯಯನ ತಂಡದ ಪ್ರವಾಸ ರಾಜ್ಯದಲ್ಲಿ ನಡೆಯುತ್ತಿದೆ.
ಯಾದಗಿರಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡ ಬೆಳೆ ಹಾನಿ ಕುರಿತು ಮಾಹಿತಿ ಪಡೆದುಕೊಂಡಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ಬೆಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿತು.
ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿ ಅಮಿತಾಭ್ ಗೌತಮ್ ನೇತೃತ್ವದಲ್ಲಿ ಸಭೆ ನಡೆಯಿತು. ಬೆಳೆ ಹಾನಿ ಕುರಿತು ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಅವರು ಅಧ್ಯಯನ ತಂಡದ ಸದಸ್ಯರಿಗೆ ವಿವರ ನೀಡಿದರು.
ಸಭೆಯ ನಂತರ, ಯಾದಗಿರಿ ತಾಲೂಕಿನ ಕಿಲ್ಲನಕೇರಿ, ದುಪ್ಪಲ್ಲಿ, ಬಳಿಚಕ್ರ, ಕೊಡ್ಲೂರು ಗ್ರಾಮಕ್ಕೆ ಭೇಟಿ ನೀಡಿದ ತಂಡವು ಹತ್ತಿ, ತೊಗರಿ ಹಾಗೂ ಭತ್ತದ ಬೆಳೆ ವೀಕ್ಷಣೆ ಮಾಡಿತು.