Select Your Language

Notifications

webdunia
webdunia
webdunia
webdunia

ಗುಂಪು ಹಲ್ಲೆ, ಗುಂಪು ಹತ್ಯೆ ತಡೆಗಾಗಿ ಕಠಿಣ ಕ್ರಮ ಏನು ಗೊತ್ತಾ?

ಗುಂಪು ಹಲ್ಲೆ, ಗುಂಪು ಹತ್ಯೆ ತಡೆಗಾಗಿ ಕಠಿಣ ಕ್ರಮ ಏನು ಗೊತ್ತಾ?
ಬೆಂಗಳೂರು , ಭಾನುವಾರ, 7 ಅಕ್ಟೋಬರ್ 2018 (18:20 IST)
ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರೆಂದು ಅಥವಾ ಗೋ ಹಂತಕರೆಂದು ಅನುಮಾನಗೊಂಡು ಅಂತಹವರ ಮೇಲೆ ಕೆಲವರಿಂದ ಕಾನೂನುಬಾಹಿರವಾಗಿ ಗುಂಪು ಹಲ್ಲೆ ನಡೆಸಿರುವುದು ಅಥವಾ ಗುಂಪು ಹತ್ಯೆ ಮಾಡಿರುವ ಪ್ರಕರಣಗಳು ಸಂಭವಿಸಿವೆ.  ಈ ರೀತಿ ಅಮಾನುಷ ಅಥವಾ ಬರ್ಬರ ಹತ್ಯೆಯಿಂದ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲಿ ಮರುಕಳಿಸದಂತೆ ರಾಜ್ಯ ಪೊಲೀಸ್ ಇಲಾಖೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಪ್ರತಿ ಜಿಲ್ಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮತ್ತು ಅವರಿಗೆ ನೆರವಾಗಲು ಮೇಲ್ದರ್ಜೆಯ ಪೊಲೀಸ್ ಅಧಿಕಾರಿಗಳನ್ನು ಸಹಾಯಕ ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. 

ಮಹಾನಗರ ಪಾಲಿಕೆಗಳ ವ್ಯಾಪ್ತಿ ಬೆಂಗಳೂರು, ಮೈಸೂರು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ  ಪ್ರದೇಶಗಳಿಗೆ ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಶಿಸ್ತುಪಾಲನೆ  ಇವರು ನೊಡೆಲ್ ಅಧಿಕಾರಿಗಳಾಗಿ ಸಹಾಯಕ ನೋಡೆಲ್ ಅಧಿಕಾರಿಯಾಗಿ ಸಂಬಂಧಪಟ್ಟ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು   ಇನ್ನುಳಿದ 24 ಜಿಲ್ಲೆಗಳಲ್ಲಿ  ನೊಡೆಲ್ ಅಧಿಕಾರಿಗಳಾಗಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಹಾಯಕ ನೊಡೆಲ್ ಅಧಿಕಾರಿಗಳಾಗಿ ಸಂಬಂಧಪಟ್ಟ ಜಿಲ್ಲೆಯ ಕೇಂದ್ರಸ್ಥಾನದ ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಂಬಂಧಪಟ್ಟ ಜಿಲ್ಲೆಯ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಲಾಗಿದೆ.

ವಿಶೇಷ ಗಸ್ತುದಳ ರಚನೆ ಮೂಲಕ ದ್ವೇಷಭಾಷಣ, ಪ್ರಚೋದನಕಾರಿ ಹೇಳಿದ ಆಥವಾ ಸುಳ್ಳು ಸುದ್ದಿ ಹರಡುವವರ ಕುರಿತು ಗುಪ್ತ ವರದಿ ಸಂಗ್ರಹಿಸುವುದು ಮತ್ತು ನಿಗಾ ವಹಿಸುವುದು.  ಗಲಭೆಗೀಡಾಗಬಹುದಾದ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ, ಪ್ರತಿ ತಿಂಗಳು ನೋಡೆಲ್ ಅಧಿಕಾರಿಗಳಿಂದ ತಮ್ಮ ಪ್ರದೇಶ ವ್ಯಾಪ್ತಿಯ ಗುಪ್ತದಳದೊಂದಿಗೆ ಸಭೆ ಮತ್ತು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಪೊಲೀಸ್ ಇಲಾಖೆ ಕೈಗೊಳ್ಳಲಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾಮನಗರ ಉಪಚುನಾವಣೆಗೆ ನಾನೇ ಅಭ್ಯರ್ಥಿ ಎಂದ ಅನಿತಾ ಕುಮಾರಸ್ವಾಮಿ