Select Your Language

Notifications

webdunia
webdunia
webdunia
webdunia

ತೀವ್ರ ಕುತೂಹಲ ಕೆರಳಿಸಿದ ರಾಜ್ಯ ಬಜೆಟ್: ರೈತರ ಸಾಲ ಮನ್ನಾ ನಿರೀಕ್ಷೆ

ತೀವ್ರ ಕುತೂಹಲ ಕೆರಳಿಸಿದ ರಾಜ್ಯ ಬಜೆಟ್: ರೈತರ ಸಾಲ ಮನ್ನಾ ನಿರೀಕ್ಷೆ
ಬೆಂಗಳೂರು , ಮಂಗಳವಾರ, 14 ಮಾರ್ಚ್ 2017 (16:22 IST)
ಬಹುನಿರೀಕ್ಷಿತ ರಾಜ್ಯ ಬಜೆಟ್ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಸಿಎಂ ಸಿದ್ದರಾಮಯ್ಯ ಬೆಳಿಗ್ಗೆ 11.30 ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ರೈತರ ಸಾಲ ಮನ್ನಾಗೆ ಆದ್ಯತೆ ನೀಡಲಿದ್ದಾರೆಯೇ ಎನ್ನುವ ಕುತೂಹಲ ಕೆರಳಿಸಿದೆ. 
 
ರಾಜ್ಯ ಬಜೆಟ್ ಅಧಿವೇಶನ ಒಟ್ಟು 10 ದಿನಗಳ ಕಾಲ ಅಂದರೆ ಮಾರ್ಚ್ 28 ರವರೆಗೆ ನಡೆಯಲಿದ್ದು, ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ಸೇರಿದಂತೆ ಹಲವು ವಿಧೇಯಕಗಳಿಗೆ ತಿದ್ದುಪಡಿ ತರಲಾಗುವುದು ಎಂದು ಸ್ಪೀಕರ್ ಕೋಳಿವಾಡ್ ತಿಳಿಸಿದ್ದಾರೆ. 
 
ಬಜೆಟ್ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಕಡ್ಡಾಯವಾಗಿದ್ದು, ಕಲಾಪ ಆರಂಭವಾದ ಒಂದು ಗಂಟೆಯ ನಂತರ ಆಗಮಿಸಿದ ಶಾಸಕರನ್ನು ಗೈರುಹಾಜರು ಎಂದು ಪರಿಗಣಿಸಲಾಗುವುದು ದಿನದಲ್ಲಿ ಎರಡು ಬಾರಿ ಶಾಸಕರ ಸಹಿಯನ್ನು ಪಡೆಯಲಾಗುತ್ತಿದ್ದು, ಶಾಸಕರ ಇರುವಿಕೆ ಅವಧಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.  
 
ಅಧಿವೇಶನ ಕಲಾಪದಲ್ಲಿ ಪಾಲ್ಗೊಂಡು ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದೊಂದಿಗೆ ಚರ್ಚಿಸುವುದು ಶಾಸಕರ ಕರ್ತವ್ಯ.ಜನಪ್ರತಿನಿಧಿಗಳೇ ಗೈರುಹಾಜರಾದಲ್ಲಿ ರಾಜ್ಯದ ಜನತೆಯ ಉದ್ಧಾರ ಹೇಗೆ ಸಾಧ್ಯ ಎಂದು ಸ್ಪೀಕರ್ ಕೋಳಿವಾಡ ಪ್ರಶ್ನಿಸಿದ್ದಾರೆ.

ಬಜೆಟ್‌ನಲ್ಲಿ ರೈತರ ಸಾಲ ಮನ್ನವಾಗಲಿದೆಯೇ? ಯಾವ ವಸ್ತುಗಳು ದುಬಾರಿಯಾಗಲಿವೆ, ಯಾವ ವಸ್ತುಗಳು ದರಗಳು ಇಳಿಕೆಯಾಗಲಿವೆ, ಸೇವಾ ತೆರಿಗೆ, ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆಯೇ ಎನ್ನುವುದಕ್ಕೆ ನಾಳೆ ಉತ್ತರ ದೊರೆಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಜೆಟ್: ಚುನಾವಣೆ ದೃಷ್ಟಿಯಿಂದ ಜನಪ್ರಿಯ ಬಜೆಟ್ ಮಂಡಿಸುತ್ತಾರಾ ಸಿದ್ದರಾಮಯ್ಯ..?