ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ಅಬ್ಬರದಿಂದ ಟಮ್ಯಾಟೋ ಬೆಳೆ ಹಾಳಾಗಿದ್ದು, ಪೂರೈಕೆಯಲ್ಲಿ ವ್ಯಥ್ಯಯವಾಗಿದೆ. ಹಾಗಾಗಿ ಟಮ್ಯಾಟೋ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿತ್ತು. ದೀಢಿರ್ ಟೋಮ್ಯಾಟೋ ಏರಿಕೆಯಿಂದ ಗ್ರಾಹಕರು ಸಹ ಕಂಗಾಲಾಗಿದ್ರೆ ರೈತರು ಫುಲ್ ಖುಷಿಯಾಗಿದ್ದರು. ಇದೀಗ ಟೊಮ್ಯಾಟೋವನ್ನು ಬೆಳೆದಿದ್ದ ಬೆಳೆಗಾರ ಮಾತ್ರ ಈಗ ದರದ ಶಾಕ್ನಲ್ಲಿದ್ದು ಟೊಮ್ಯಾಟೋ ಬೆಲೆ ಇಳಿದಿದ್ದು, ಆಂಧ್ರಪ್ರದೇಶದ ಕರ್ನೂಲ್ ಮತ್ತು ನಂದ್ಯಾಲ್ ಜಿಲ್ಲೆಗಳ ರೈತರು ಟೊಮ್ಯಾಟೋಗಳನ್ನ ರಸ್ತೆಗೆ ಎಸೆದು ಪ್ರತಿಭಟನೆ ಮಾಡಿದ್ದಾರೆ.ಇನ್ನು ಮಾರುಕಟ್ಟೆಯಲ್ಲಿ 1 ಕೆಜಿ ಟೊಮ್ಯಾಟೋಗೆ 3 ರೂಪಾಯಿ ಇದ್ದು, ಕಷ್ಟಪಟ್ಟು ಬೆಳೆದ ಬೆಳೆಗೆ ಇಷ್ಟು ಕಡಿಮೆ ಬೆಲೆನಾ ಅಂತ ರೈತರು ಕಣ್ಣೀರಿಟ್ಟಿದ್ದಾರೆ.