Select Your Language

Notifications

webdunia
webdunia
webdunia
webdunia

ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: ಸಿಐಡಿ ತನಿಖೆಯಲ್ಲಿ ದೃಢಪಟ್ಟ ವಿದ್ಯಾರ್ಥಿನಿಯರ ಕೃತ್ಯ

Udupi Netra Jyothi medical college

Sampriya

ಉಡುಪಿ , ಗುರುವಾರ, 21 ಮಾರ್ಚ್ 2024 (13:44 IST)
Photo Courtesy
ಉಡುಪಿ: ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜು ಶೌಚಾಲಯದಲ್ಲಿ  ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವುದಾಗಿ ದೃಢವಾಗಿದೆ.

 ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು ಶಬನಾಜ್‌, ಅಲ್ಫಿಯಾ ಹಾಗೂ ಅಲಿಮತ್‌ ಉಲ್ ಶಫಾ ಎಂಬ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಸಹಪಾಠಿಯ ವಿಡಿಯೊ ಚಿತ್ರೀಕರಣ ಮಾಡಿರುವುದು ದೃಢವಾಗಿದೆ.

 2023ರ ಜುಲೈ 18ರಂದು ಕಾಲೇಜಿನ ಶೌಚಾಲಯದಲ್ಲಿ ಗೆಳತಿಯ ವಿಡಿಯೊ ಮಾಡಿದ್ದರು. ಆದರೆ, ಆ ವಿಡಿಯೊದಲ್ಲಿ ಗೆಳತಿಯ ಬದಲಾಗಿ ಬೇರೆ ಯುವತಿ ಇರುವುದು ಅರಿವಿಗೆ ಬಂದಿದೆ. ಆರೋಪಿತ ವಿದ್ಯಾರ್ಥಿನಿಯರು ತಮಾಷೆ ಹಾಗೂ ಪ್ರ್ಯಾಂಕ್‌ ವಿಡಿಯೊ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದರು.

ವಿದ್ಯಾರ್ಥಿನಿಯರ ಕೈಬರಹ ಹಾಗೂ ಕ್ಷಮಾಪಣಾ ಪತ್ರದ ಬರಹ ತಾಳೆಯಾಗುತ್ತಿದೆ ಎಂದು ಎಫ್‌ಎಸ್‌ಎಲ್‌ ವರದಿಯೂ ದೃಢೀಕರಿಸಿದೆ. ಜತೆಗೆ ಕಾಲೇಜಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ವಿದ್ಯಾರ್ಥಿನಿಯರ ಮೇಲಿರುವ ಆರೋಪಗಳಿಗೆ ಪೂರಕವಾಗಿದೆ ಎಂದು ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಬಾಂಡ್‌ಗಳಿಂದ ಬಿಜೆಪಿಯ ಖಜಾನೆ ಭರ್ತಿ: ಮಲ್ಲಿಕಾರ್ಜುನ ಖರ್ಗೆ ಆರೋಪ