Publish Date: Mon, 10 Jul 2023 (07:18 IST)
Updated Date: Mon, 10 Jul 2023 (09:20 IST)
ಇಂದು ಅಧಿದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ. ಈ ಹಿನ್ನೆಲೆ ಭಕ್ತರಿಗೆ ಬೆಳಗ್ಗೆ 8 ಗಂಟೆಯ ನಂತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮುಂಜಾನೆ 3.30ರಿಂದಲೇ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ನಡೆಯುತ್ತಿದ್ದು ಬೆಳಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ವರ್ಧಂತಿ ಉತ್ಸವ ಆರಂಭವಾಗಲಿದೆ. ಯದುವಂಶದ ಪ್ರಮೋದದೇವಿ ಒಡೆಯರ್, ಯದುವೀರ ಕೃಷ್ಣದತ್ತ ತ್ರಿಷಿಕಾ ಕುಮಾರಿ, ಆದ್ಯವೀರ ಹಾಗೂ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.