Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಟಿಪ್ಪು ಪಠ್ಯ ಪರಿಷ್ಕರಣೆ : ಶಿಕ್ಷಣ ಸಚಿವರಿಂದ ಇಂದೇ ಮಹತ್ವದ ತೀರ್ಮಾನ ಸಾದ್ಯತೆ

ಟಿಪ್ಪು ಪಠ್ಯ ಪರಿಷ್ಕರಣೆ
bangalore , ಸೋಮವಾರ, 28 ಮಾರ್ಚ್ 2022 (19:39 IST)
ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯ ಪರಿಷ್ಕರಣೆ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಾಳೆ ಮಹತ್ವದ ಮಾಹಿತಿ ನೀಡಲಿದ್ದು, ಇಂದೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.ಟಿಪ್ಪು ಪಠ್ಯವನ್ನು ಕೈಬಿಡಬೇಕೆಂಬ ಒತ್ತಾಯ ಹೆಚ್ಚಾಗಿದ್ದು, ಪರ- ವಿರೋಧಗಳ ಚರ್ಚೆ ಈಗಾಗಲೇ ವ್ಯಾಪಕವಾಗಿ ನಡೆಯುತ್ತಿದೆ.ಈ ನಡುವೆ ಟಿಪ್ಪು ಪಠ್ಯ ಪರಿಷ್ಕರಣೆಗೆ ಉತ್ತರ ನೀಡಲು ರಾಜ್ಯ ಸರ್ಕಾರ ನಾಳೆ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದ್ದು, ಸರ್ಕಾರದ ನಡೆ ತೀವ್ರ ಕುತೂಹಲ ಕೆರಳಿಸಿದೆ.ಈಗಾಗಲೇ ಅಧಿಕಾರಿಗಳಿಗೆ ಈ ಸಂಬಂಧ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯ ಚಕ್ರತೀರ್ಥ ಈಗಾಗಲೇ ಇಲಾಖೆಗೆ ಕಡಿತದ ವರದಿ ನೀಡಿದ್ದಾರೆ. ಅಧಿಕಾರಿಗಳಿಂದ ಬಿಸಿ ನಾಗೇಶ್ ಮಾಹಿತಿ ತರಿಸಿಕೊಂಡಿದ್ದಾರೆ. ಇಂದೇ ನಡೆಯುವ ಕಲಾಪದಲ್ಲಿ ಉತ್ತರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 30ರಿಂದ ಐತಿಹಾಸಿಕ ʼಅಮರನಾಥ ಯಾತ್ರೆʼ ಆರಂಭ