Webdunia - Bharat's app for daily news and videos

Install App

ಮಡಿಕೇರಿ ಮಂಜಲ್ಲಿ ಟಿಪ್ಪು ಗದ್ದಲ: ಹದ್ದಿನ ಕಣ್ಣಿಟ್ಟ ಪೊಲೀಸ್ ಇಲಾಖೆ, ಎಲ್ಲೆಡೆ ಕಟ್ಟೆಚ್ಚರ!

Webdunia
ಸೋಮವಾರ, 7 ನವೆಂಬರ್ 2016 (10:35 IST)
ಈಗಂತೂ ಕೊಡಗಿನ ಮಡಿಕೇರಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕಳೆದ ವರ್ಷದ ಟಿಪ್ಪು ಜಯಂತಿಯಂದು ನಡೆದ ಘಟನೆಯಿಂದಲೇ ಅಲ್ಲಿಯ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿದ್ದಾಗ ಸರಕಾರ ಸಾಕಷ್ಟು ವಿರೋಧ ಮೈ ಮೇಲೆ ಹಾಕಿಕೊಂಡು ಹಠಕ್ಕೆ ಬಿದ್ದವರಂತೆ ಪ್ರಸ್ತುತ ವರ್ಷ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಪರಿಣಾಮ ಏನೂ ಬೇಕಾದರೂ ಸಂಭವಿಸಬಹುದು!
 
ಹೌದು, ನ. 10ರ ಟಿಪ್ಪು ಜಯಂತಿ ವೇಳೆ ಏನಾದರೂ ಅಹಿತರಕರ ಘಟನೆಗಳು ಸಂಭವಿಸಬಹುದೆಂದು ಪೂರ್ವಾಲೋಚನೆಯಿಂದ ಸರಕಾರ ನಾಡಿದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಿದೆ. ಅದರಲ್ಲೂ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಮಡಿಕೇರಿಯಲ್ಲಿ 107 ಸೆಕ್ಷನ್ ಜಾರಿಗೆ ಮಾಡಲಾಗಿದೆ. ಪ್ರಕೃತಿಯ ಮಡಿಲಲ್ಲಿ ಮಂಜಿನ ನಡುವೆ ತಣ್ಣಗಿರುತ್ತಿದ್ದ ಕೊಡಗಿನಲ್ಲಿ ಈಗ ಬಿಸಿಯ ಬೇಗೆ. ಎಲ್ಲಿ ನೋಡಿದರಲ್ಲಿ ಪೊಲೀಸ್ರೇ ತುಂಬಿಕೊಂಡಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಿ ಸಿಸಿಟಿವಿ ಅಳವಡಿಸಲಾಗಿದೆ. ಎಷ್ಟೇ ವಿರೋಧವಿದ್ದರೂ ಟಿಪ್ಪು ಜಯಂತಿಯನ್ನು ಆಚರಿಸಿಯೇ ಸಿದ್ಧ ಎಂದು ಸರಕಾರ ಸಾರ್ವಜನಿಕವಾಗಿ ತೊಡೆತಟ್ಟಿ ನಿಂತಿದೆ.
 
ಕೊಡಗಿನಲ್ಲಿ ಜಿಲ್ಲಾಡಳಿತ ನ. 10ರಂದು ಸರಕಾರದ ಆದೇಶದಂತೆ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷ ಮಡಿಕೇರಿಯಲ್ಲಿ ನಡೆದಿದ್ದ ಗಲಭೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಎಲ್ಲಿ ನಡೆಯುತ್ತದೆ ಎನ್ನುವುದು ಜಿಲ್ಲಾಡಳಿತ ಇನ್ನೂ ಬಹಿರಂಗ ಪಡಿಸಿಲ್ಲ. ಸದ್ಯಕ್ಕೆ ಗೌಪ್ಯವಾಗಿಟ್ಟಿರುವ ಸ್ಥಳವನ್ನು ಆಚರಣೆ ಮುನ್ನಾದಿನ ಸಾರ್ವಜನಿಕವಾಗಿ ಬಹಿರಂಗಗೊಳಿಸಲಿದೆ ಎನ್ನಲಾಗುತ್ತಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಸೀಮಿತ ವ್ಯಕ್ತಿಗಳನ್ನಷ್ಟೇ ಆಹ್ವಾನಿಸಿ, ಅವರಿಗೆಲ್ಲರಿಗೂ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡಿದೆ. ಕಾರ್ಯಕ್ರಮ ಸಹ ಕೆಲವೇ ಕೆಲವು ನಿಮಿಷಗಳಲ್ಲಿ ಪೂರ್ಣಗೊಳಿಸುವ ನಿಧರ್ಾರಕ್ಕೂ ಜಿಲ್ಲಾಡಳಿತ ಬಂದಿದೆ. 
 
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಕಳೆದ ವರ್ಷದ ಗಲಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಿದೆ. ನೂರಕ್ಕೂ ಹೆಚ್ಚು ಮಂದಿ `ಯಾವುದೇ ಅಹಿತಕರ ಘಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ' ಎಂದು ಈಗಾಗಲೇ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಇನ್ನಷ್ಟು ಜನರು ಪೊಲೀಸರ ಬಿಗಿ ಕ್ರಮದಿಂದಾಗಿ ಊರನ್ನೇ ಬಿಡುತ್ತಿದ್ದಾರೆ. ಇವುಗಳ ನಡುವೆಯೇ 40 ಕೆ.ಎಸ್.ಆರ್.ಪಿ ತುಕಡಿಯನ್ನು ಬಂದೋಬಸ್ತಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ನಾಳೆಯಿಂದಲೇ ಜಿಲ್ಲೆಯಾದ್ಯಂತ ನ. 8ರಿಂದ ನಿಷೇಧಾಜ್ಞೆ ಜಾರಿ ಮಾಡುವ ಸಾಧ್ಯತೆಯಿದೆ.
 
ಟಿಪ್ಪು ಜಯಂತಿ ದಿನದಂದು ನಗರದಲ್ಲಿ ಯಾವುದೇ ಸಾರ್ವಜನಿಕರ ಸಭೆ, ಸಮಾರಂಭಗಳಿಗೆ ಅನುಮತಿ ನೀಡಲಾಗುತ್ತಿಲ್ಲ. ಸಂಘಟನೆಗಳು ಮತ್ರ ಜಿಲ್ಲಾಡಳಿತ ಭವನದ ಎದುರು ಮನವಿ ಪತ್ರಗಳನ್ನಷ್ಟೇ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಉಳಿದಂತೆ ಅಂದು ಜಿಲ್ಲೆಯಾದ್ಯಂತ ಯಾವುದೇ ಬ್ಯಾನರ್, ಪೋಸ್ಟರ್ ಅಳವಡಿಸಬಾರದೆಂದು ಕಟ್ಟುನಿಟ್ಟಿಒನ ಆದೇಶ ಹೊರಡಿಸಿದೆ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಪೊಲೀಸರು ಗಸ್ತು ತಿರುಗುತ್ತಿದ್ದು, ವಸತಿಗೃಹ, ಹೋಂ ಸ್ಟೇಗಳಿಗೆ ಆಗಮಿಸುವ ಪ್ರವಾಸಿಗರ ವಿಳಾಸವನ್ನು ಬರೆದಿಟ್ಟುಕೊಳ್ಳಲಾಗುತ್ತಿದೆ.
 
ಟಿಪ್ಪು ಜಯಂತಿಯನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹೊರತು ಪಡಿಸಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆಚರಿಸುವಂತಿಲ್ಲ. ಅಲ್ಲದೆ ಮೆರವಣಿಗೆಯನ್ನು ಸಹ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಒಳ ಮತ್ತು ಹೊರಹೋಗುವ ವಾಹನಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಿ, ಚಾಲಕರ ವಿಳಾಸ ಬರೆದಿಟ್ಟುಕೊಳ್ಳಲಾಗುತ್ತಿದೆ. ಇವುಗಳ ನಡುವೆಯೇ ಕೆಲವು ಸಂಘಟನೆಗಳ ಚಲನ-ವಲನವನ್ನು ಗುಪ್ತಚರ ಇಲಾಖೆ ಸಿಬ್ಬಂದಿ ಸಂಗ್ರಹಿಸುತ್ತಿದ್ದು, ಕೊಡಗಿನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸರಕಾರಕ್ಕೆ ಪ್ರತಿನಿತ್ಯ ಅಪ್ಡೇಟ್ ಮಾಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ದಶಕದ ಬಳಿಕ ನಡೆದ ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

ಇಸ್ರೇಲ್‌ನಲ್ಲಿ ಆರೈಕೆ ಮಾಡುತ್ತಿದ್ದ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಕೇರಳದ ಯುವಕ

ಮುಂದಿನ ಸುದ್ದಿ
Show comments