Select Your Language

Notifications

webdunia
webdunia
webdunia
webdunia

ಎರಡನೇ ಪತ್ನಿ ವಿಚಾರ ಮುಚ್ಚಿಟ್ಟರೆಂದು ಶಾಸಕರ ಮೇಲೆ ದೂರು

ಎರಡನೇ ಪತ್ನಿ ವಿಚಾರ ಮುಚ್ಚಿಟ್ಟರೆಂದು ಶಾಸಕರ ಮೇಲೆ ದೂರು
Bangalore , ಸೋಮವಾರ, 3 ಜುಲೈ 2017 (14:20 IST)
ಬೆಂಗಳೂರು: ತಿಪಟೂರು ಕ್ಷೇತ್ರದ ಶಾಸಕ ಕೆ. ಷಡಕ್ಷರಿಗೆ ಇದೀಗ ಎರಡನೇ ಮದುವೆ ಕಂಟಕ ಎದುರಾಗಿದೆ. ಎರಡನೇ ಪತ್ನಿ ಮತ್ತು ಮಗನ ಹೆಸರಿನಲ್ಲಿ ಸಾಕಷ್ಟು ಅಕ್ರಮ ಆಸ್ಥಿ ಹೊಂದಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಿ ಮಾಹಿತಿ ಹಕ್ಕು ಹೋರಾಟಗಾರ ರವಿ ಕುಮಾರ್ ದೂರು ನೀಡಿದ್ದಾರೆ.

 
ಶಿವಗಂಗಮ್ಮ ಷಡಕ್ಷರಿ ಮೊದಲ ಪತ್ನಿ. ಶಾರದಮ್ಮ ದ್ವಿತೀಯ ಪತ್ನಿ. ದ್ವಿತೀಯ ಪತ್ನಿಯಿಂದಲೂ ಷಡಕ್ಷರಿ ಓರ್ವ ಪುತ್ರನನ್ನು ಹೊಂದಿದ್ದಾರೆ. ಆದರೆ ಈ ವಿಚಾರವನ್ನು ಚುನಾವಣಾ ಆಯೋಗದಿಂದ ಮುಚ್ಚಿಟ್ಟಿದ್ದಾರೆ. ದ್ವಿತೀಯ ಪತ್ನಿ ಹೆಸರಿನಲ್ಲಿ ಷಡಕ್ಷರಿ ಬೇಕಾದಷ್ಟು ಆಸ್ಥಿ ಮಾಡಿಕೊಂಡಿದ್ದಾರೆ ಎಂಬುದು ಅವರ ಮೇಲೆ ರವಿ ಕುಮಾರ್ ಮಾಡಿರುವ ಆರೋಪ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಈ ಆಸ್ಥಿ ಲೆಕ್ಕ ಚುನಾವಣಾ ಆಯೋಗಕ್ಕೆ ಶಾಸಕರು ನೀಡಿಲ್ಲ. ಹೀಗಾಗಿ ಶಾಸಕರ ಶಾಸಕತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರವಿ ಕುಮಾರ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಷಡಕ್ಷರಿ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಪ್ರಬಲ ಶಾಸಕರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಇಂಡಿಯಾ ವಿಮಾನದಲ್ಲಿ ಒದ್ದಾಡಿದ ಪ್ರಯಾಣಿಕರು