Select Your Language

Notifications

webdunia
webdunia
webdunia
webdunia

ಕೂಪನ್ ಮೂಲಕ ಪಡಿತರ ಧಾನ್ಯ ವಿತರಣೆ: ಖಾದರ್

ಕೂಪನ್ ಮೂಲಕ ಪಡಿತರ ಧಾನ್ಯ ವಿತರಣೆ: ಖಾದರ್
ಬೆಂಗಳೂರು , ಸೋಮವಾರ, 25 ಜುಲೈ 2016 (18:15 IST)
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅಗಸ್ಟ್‌ ತಿಂಗಳಿನಿಂದ ಕೂಪನ್ ಮೂಲಕ ಪಡಿತರ ಧಾನ್ಯ ವಿತರಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದರು.
 
ನಕಲಿ ಕಾರ್ಡ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಅಗಸ್ಟ್ ತಿಂಗಳಿಂದ ಪ್ರಾಯೋಗಿಕವಾಗಿ ಕೂಪನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಈ ಯೋಜನೆ ಯಶಸ್ವಿಯಾದರೇ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
 
ಕೂಪನ್‌ ಹೊಂದಿರುವ ಫಲಾನುಭವಿಗಳು ನ್ಯಾಯಬೆಲ್ ಅಂಗಡಿಗೆ ಹೋಗಿ ಆಹಾರ ಪದಾರ್ಥಗಳನ್ನು ಪಡೆಯಬೇಕಂತ್ತಿಲ್ಲ. ಯಾವುದೇ ಅಂಗಡಿಯಿಂದಲೂ ಪಡಿತರ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗೆ ಪೂರೈಕೆ ಮಾಡುವ ಧಾನ್ಯಗಳ ಪ್ರಮಾಣವನ್ನು 10 ಪ್ರತಿಶತ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
 
 ಈ ಹಿಂದೆ ಸೀಮೆ ಎಣ್ಣೆಯನ್ನು ಪಡಿತರ ಪಲಾನುಭವಿಗಳಿಗೆ ಕೂಪನ್ ಮೂಲಕ ವಿತರಿಸಲಾಗುತ್ತಿತ್ತು. ಈ ಯೋಜನೆ ಯಶಸ್ವಿಯಾಗಿರುವ ಬೆನ್ನಲ್ಲಿ ಪಡಿತರ ಧಾನ್ಯವನ್ನು ಕೂಪನ್ ಮೂಲಕ ವಿತರಿಸಲು ನಿರ್ಧರಿಸಲಾಗಿದೆ. 
 
ಈ ಯೋಜನೆ ಯಶಸ್ವಿಗೊಳ್ಳಲು ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿನಿಧಿಗಳು ಸಹಕರಿಸಬೇಕು ಎಂದು ವಿನಂತಿಸಿಕೊಂಡರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ಸಂಚಾರ ಅಸ್ತವ್ಯಸ್ಥ: ಸರಕಾರ ಮಧ್ಯಪ್ರವೇಶಕ್ಕೆ ಯಡಿಯೂರಪ್ಪ ಮನವಿ