ಬೆಂಗಳೂರಿನ ಭಾರೀ ಮಳೆಗೆ ಕುಸಿದ ಮೂರು ಮನೆಗಳು

Webdunia
ಸೋಮವಾರ, 8 ಮೇ 2023 (20:50 IST)
ಭಾರೀ ಮಳೆಗೆ ನಗರದಲ್ಲಿ ಮೂರು ಮನೆಗಳು ಕುಸಿದಿರುವ ಘಟನೆ ಬೆಂಗಳೂರಿನ ಪಿಇಎಸ್ ಕಾಲೇಜ್ ಬಳಿಯ ವೀರಭದ್ರ ನಗರದಲ್ಲಿ ನಡೆದಿದೆ.ಅಪಾರ್ಟ್ ಮೆಂಟ್ ನ ತಡೆಗೋಡೆ ಸಮೇತ ಸಂಪೂರ್ಣವಾಗಿ ಮನೆಗಳು ನೆಲ ಸಮವಾಗಿದೆ.ವಸುಂಧರ ಕೃತಿಕಾ ಅಪಾರ್ಟ್ ಮೆಂಟ್ ನ ತಡೆ ಗೋಡೆ ಸಮೇತ  ಮನೆ ಬಿದ್ದಿದ್ದು,ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರೆಡು ಕಾರುಗಳು ಸಂಪೂರ್ಣ ಜಖಂ ಆಗಿದೆ. ಮತ್ತೆರಡು ಕಾರುಗಳಿಗೂ ಹಾನಿ ಉಂಟಾಗಿದೆ.ಘಟನೆಯಲ್ಲಿ ಯಾರಿಗೂ ಸಹ ಹಾನಿಯಾಗಿಲ್ಲ.ಗೋಪಾಲ್ ಹಾಗೂ ಗೋವಿಂದಯ್ಯ ಎಂಬುವರ ಮನೆ ಸಂಪೂರ್ಣ ಕುಸಿದು ಹಾನಿಯಾಗಿದೆ.
 
ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನೆಲಸಮವಾಗಿದ್ದು,ದುರ್ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ..ಅಪಾರ್ಟ್ ಮೆಂಟ್ ತಡೆಗೋಡೆ ಸರಿಯಾಗಿ ಕಟ್ಟಿಲ್ಲದಿದ್ದೇ ಘಟನೆ ಕಾರಣ ಅಂತ ಸ್ಲಂ ನಿವಾಸಿಗಳು ಆರೋಪ ಮಾಡಿದ್ದಾರೆ.ಆದ್ರೆ ಸ್ಲಂನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ.ಇದರಿಂದ ಪ್ರತಿನಿತ್ತ ಬರುವ ಕೊಳಚೆ ನೀರಿನಿಂದ ಕಾಂಪೌಂಡ್ ವಾಲ್ ಕುಸಿದಿದೆ ಎಂದು ಅಪಾರ್ಟ್ ನಿವಾಸಿಗಳು ಹೇಳ್ತಿದ್ದು,ಮತ್ತೊಂದು ಕಡೆ ಇನ್ನೂ ಬೀಳುವ ಸ್ಥಿತಿಯಲ್ಲಿ ಐದಾರು ಮನೆಗಳಿವೆ.ಮಧ್ಯಾಹ್ನ ಘಟನೆಯಾದ್ರೂ ಇನ್ನೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ.ಮನೆ ಕಳೆದುಕೊಂಡ ಸ್ಲಂ ನಿವಾಸಿಗಳಿಂದ ಅಳಲು ಕೇಳತಿರದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಹೋದ್ಯೋಗಿಯೊಂದಿಗಿನ ಆಫೇರ್‌ನಿಂದ 150 ಕೋಟಿ ಸಂಬಳದ ಕೆಲಸ ಕಳೆದುಕೊಂಡ ವ್ಯಕ್ತಿ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

Bengaluru Rains: ಬೆಂಗಳೂರಿನಲ್ಲಿ ದಿಡೀರ್ ಭಾರೀ ಮಳೆ

ಕೃಷಿ ಸಚಿವರು ಡೆಲ್ಲಿಗೆ ಬೇರೆ ಕೆಲಸಕ್ಕೆ ಹೋಗಿದ್ದಾರೆ ಬಿಡಯ್ಯಾ: ಮಾಧ್ಯಮಗಳ ಮೇಲೆ ಗರಂ ಆದ ಸಿಎಂ

ದೆಹಲಿಗೆ ಹೋದ ಶಾಸಕರಿಗೆ ಖುದ್ದು ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments