Select Your Language

Notifications

webdunia
webdunia
webdunia
webdunia

ಗೃಹಿಣಿ ಮೇಲೆ ಮೂವರು ಕಾಮುಕರಿಂದ ಗ್ಯಾಂಗ್‌ರೇಪ್

ಗೃಹಿಣಿ ಮೇಲೆ ಮೂವರು ಕಾಮುಕರಿಂದ ಗ್ಯಾಂಗ್‌ರೇಪ್
ಬೆಳಗಾವಿ , ಮಂಗಳವಾರ, 18 ಏಪ್ರಿಲ್ 2017 (18:05 IST)
ಗೃಹಿಣಿ ಮೇಲೆ ಮೂವರು ಕಾಮುಕರು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವರದಿಯಾಗಿದೆ.
 
ಮಹಿಳೆ ಏಕಾಂಗಿಯಾಗಿರುವಾಗ ಮನೆಗೆ ನುಗ್ಗಿದ ಕಾಮುಕರು ಹರಿತವಾದ ಆಯುಧಗಳಿಂದ ಬೆದರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮೂವರು ಆರೋಪಿಗಳಾದ ಸುನೀಲ್ ಚೌಗಲೆ, ಆನಂದ್, ಶಿವಪ್ರಭು ಎನ್ನುವವರು ಗೃಹಿಣಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಆತ್ಮಾವಲೋಕನ ಸಭೆ