Select Your Language

Notifications

webdunia
webdunia
webdunia
webdunia

ಈ ದಿನ ರಾಜ್ಯಾದಾದ್ಯಂತ ಮದ್ಯ ಮಾರಾಟ ಬಂದ್‌ಗೆ ನಿರ್ಧಾರ, ಕಾರಣ ಹೀಗಿದೆ

Karnataka Wine Merchants Association, Excise Minister of bribery, Liquor Scam

Sampriya

ಬೆಂಗಳೂರು , ಮಂಗಳವಾರ, 5 ನವೆಂಬರ್ 2024 (18:34 IST)
Photo Courtesy X
ಬೆಂಗಳೂರು: ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ವ್ಯಾಪಾರಿಗಳಿಂದ ಮಾಸಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಷನ್ ​​ಗಂಭೀರ ಆರೋಪ ಮಾಡಿದೆ.

 ಇದೀಗ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನ.20ರಂದು ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ದಿನ ರಾಜ್ಯಾದಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಲು ತೀರ್ಮಾನಿಸಲಾಗಿದೆ.

ಅಧಿಕಾರಿಗಳು ತಮ್ಮ ವರ್ಗಾವಣೆ, ಪ್ರಮೋಷನ್ಗಾಗು ಲಕ್ಷ ಲಕ್ಷ ,ಕೋಟಿ ಕೋಟಿ ಲಂಚ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳು ಸನ್ನದುದಾರರಿಂದ ಮನಸೋ ಇಚ್ಚೆ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದೆ.

 ರಾಜ್ಯದ ಅಬಕಾರಿ ಇಲಾಖೆ ಭ್ರಷ್ಟಾಚಾರ ಖಂಡಿಸಿ ಮುಷ್ಕರ ನಡೆಸಲು ಮದ್ಯದಂಗಡಿ ಮಾಲೀಕರು ನಿರ್ಧರಿಸಿದ್ದು, ನವೆಂಬರ್20 ರಾಜ್ಯವ್ಯಾಪ್ತಿ ಮದ್ಯ ಮಾರಾಟ ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದೀಗ ಭ್ರಷ್ಟಚಾರಕ್ಕೆ ಬೇಸತ್ತು ಬೇಸತ್ತು ರಾಜಭವನ ಮೆಟ್ಟಿಲೇರಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್​ಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್ ವಿವಾದಕ್ಕೆ ಕೇಂದ್ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರ ಎಂಟ್ರಿ