Publish Date: Wed, 09 Nov 2022 (20:19 IST)
Updated Date: Wed, 09 Nov 2022 (20:23 IST)
ಕಾಂಗ್ರೆಸ್ ಅಂದರೆ ಪುಂಡರ ಗುಂಪು. ಅದನ್ನು ಅವರೇ ಬೀದಿಗೆ ಇಟ್ಟು ಪ್ರದರ್ಶಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಹುಚ್ಚರಿಗೆ ಅಮವಾಸ್ಯೆ, ಹುಣ್ಣಿಮೆ ಬಂದಾಗ ತಲೆ ಕೆಡುತ್ತದಂತೆ. ಹಾಗೆಯೇ ಕಾಂಗ್ರೆಸ್ಸಿಗರಿಗೂ ಆಗಿದೆ. ಹಿಂದುತ್ವವನ್ನು ಅನುಮಾನ ಪಡುವವರು ಅವರ ತಂದೆ ತಾಯಿಯನ್ನೂ ಅನುಮಾನ ಪಟ್ಟಂತೆಯೇ. ಕಾಂಗ್ರೆಸ್ನವರು ಕೇಸರಿ ಬಣ್ಣ ಕಂಡರೆ ಮೂರ್ಛೆ ಹೋಗುತ್ತಾರೆ. ಬಿಳಿ ಟೋಪಿ ಕಂಡರೆ ಟೋಪಿ ಹಾಕಿಸಿಕೊಂಡು ತಲೆ ಬಾಗುತ್ತಾರೆ ಎಂದು ಅಪಹಾಸ್ಯ ಮಾಡಿದ್ರು. ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಉಚ್ಛಾಟನೆ ಮಾಡದೇ ಇದ್ದರೆ ಸತೀಶ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪಿಕೊಂಡು ಅವರು ಹಿಂದೂ ವಿರೋಧಿಯಾದಂತಾಗುತ್ತದೆ ಎಂದಿದ್ದಾರೆ.