Webdunia - Bharat's app for daily news and videos

Install App

ಇವ್ರು ಪ್ರಾಣಿಗಳ ಎಲುಬಿನಿಂದ ಡಾಲ್ಡ ತಯಾರಿಸ್ತಿದ್ರು..!

Webdunia
ಸೋಮವಾರ, 7 ನವೆಂಬರ್ 2016 (10:55 IST)
ಕಲಬುರಗಿ: ಕೆಲವು ಆಹಾರ ಪದಾರ್ಥ ಕಲಬೆರಕೆ ಎನ್ನುವ ಮಾತನ್ನು ಅಲ್ಲಲ್ಲಿ ಕೇಳಿದ್ದೇವೆ‌. ಅದರಲ್ಲಿ ವನಸ್ಪತಿ(ಡಾಲ್ಡ) ಪ್ಯೂರ್ ವೆಜ್ ಅಂದುಕೊಂಡರೆ ನಿಮ್ಮ ನಂಬಿಕೆ ತಪ್ಪು. ಯಾಕೆಂದರೆ, ಅದನ್ನು ಪ್ರಾಣಿಗಳ ಎಲುಬಿನಿಂದಲೂ ತಯಾರಿಸುತ್ತಾರೆ.
ಇಂತಹದ್ದೊಂದು ಪ್ರಕರಣ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜವಳಗಾ ಗ್ರಾಮದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಪ್ರಾಣಿಗಳ ಎಲುಬಿನಿಂದ ಡಾಲ್ಡಾ ತಯಾರಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ, ಅಲ್ಲಿಯ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಡಾಲ್ಡ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ಹಾಗೂ ಅಪಾರ ಪ್ರಮಾಣದ ನಾನ್'ವೆಜ್ ಡಾಲ್ಡಗಳನ್ನು ವಶಪಡಿಸಿಕೊಂಡಿದ್ದಾರೆ.
 
ಸಂಬಂಧಿಸಿ ನರೋಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಜವಳಗಾ ಗ್ರಾಮದ ಹೊರ ವಲಯದಲ್ಲಿ ನಾಲ್ಕೈದು ತಿಂಗಳ ಹಿಂದಿನಿಂದಲೇ ಪ್ರಾಣಿಗಳ ಎಲುಬು ಬಳಸಿ ಡಾಲ್ಡ ತಯಾರಿಸುವವರು ಬೀಡು ಬಿಟ್ಟಿದ್ದರು ಎನ್ನಲಾಗುತ್ತಿದೆ. ಅಪಾರ ಪ್ರಮಾಣದ ನಾನ್'ವೆಜ್ ಡಾಲ್ಡಗಳನ್ನು ತಯಾರಿಸಿ ಹೈದರಾಬಾದ ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ಸರಬರಾಹಲಜು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮರನಾಥ ಯಾತ್ರೆ 2025: ಐದು ಬಸ್‌ಗಳು ಪರಸ್ಪರ ಡಿಕ್ಕಿ, 36ಯಾತ್ರಾರ್ಥಿಗಳಿಗೆ ಗಾಯ

ಆರ್ ಎಸ್ಎಸ್ ಬಗ್ಗೆ ಹುಚ್ಚುತನದ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಿ: ಯಡಿಯೂರಪ್ಪ

ದ.ಕನ್ನಡ, ಮದುವೆಯಾಗುವುದಾಗಿ ನಂಬಿಸಿ, ತಾಯಿಯಾಗುವಂತೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ವಶಕ್ಕೆ

Arecanut Price: ಅಡಿಕೆ, ಕೊಬ್ಬರಿ ಬೆಲೆ ಇಳಿಕೆ, ಕಾಳುಮೆಣಸು, ಕೊಬ್ಬರಿ ಎಷ್ಟಾಗಿದೆ ನೋಡಿ

ಆಷಾಢ ಶುಕ್ರವಾರ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ತೇಜಸ್ವಿ ಸೂರ್ಯ ದಂಪತಿ: ವಿಡಿಯೋ

ಮುಂದಿನ ಸುದ್ದಿ
Show comments