Select Your Language

Notifications

webdunia
webdunia
webdunia
webdunia

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ ಎಂದ ನಟಿ ರಮ್ಯಾ

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ ಎಂದ ನಟಿ ರಮ್ಯಾ
ಬೆಂಗಳೂರು , ಮಂಗಳವಾರ, 23 ಆಗಸ್ಟ್ 2016 (12:26 IST)
ಪಾಕಿಸ್ತಾನ ಪರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ತಿಳಿಸಿದ್ದಾರೆ.
 
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ನಾನು ದೇಶ ವಿರೋಧಿ ಅಲ್ಲ ಹಾಗೂ ದೇಶ ವಿರೋಧಿ ಹೇಳಿಕೆ ನೀಡಿಲ್ಲ. ಕೇವಲ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ನನ್ನ ಹೇಳಿಕೆಯಿಂದ ಕ್ಷಮೆ ಕೇಳುವ ಪ್ರಶ್ನೆಯೆ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. 
 
ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ತಾನ ನರಕವಿದ್ದಂತೆ ಅಂತಾ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ನಟಿ ರಮ್ಯಾ ಅವರು ಪಾಕಿಸ್ತಾನದಲ್ಲಿ ಹಾಗೇನಿಲ್ಲ. ಅಲ್ಲಿನ ಜನರು ನಮ್ಮಂತೆ ಒಳ್ಳೆಯವರು ಅಂತಾ ಹೇಳುವ ಮೂಲಕ ಪಾಕಿಸ್ತಾನವನ್ನು ಹಾಡಿ ಹೊಗಳಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. 
 
ನಟಿ ರಮ್ಯಾ ಪಾಕಿಸ್ತಾನ ಪರ ಹೇಳಿಕೆ ನೀಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ರಮ್ಯಾ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಹಲವು ಸಂಘಟನೆಗಳು ಪ್ರತಿಭಟನೆ ಕೈಗೊಂಡಿದ್ದವು. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಯಾಗುವುದು ಪ್ರಥಮ ನೋಟದಲ್ಲಲ್ಲವಂತೆ, ಮತ್ತೆ ?