ಅಭಿವೃದ್ಧಿಗೆ ಹಣವಿಲ್ಲ, ಭ್ರಷ್ಟಚಾರದ ಪಿತಾಮಹನ ಕಛೇರಿ ನವೀಕರಣಕ್ಕೆ ಕೋಟಿ ಕೋಟಿ ಹಣವಿದೆ: ಬಿಜೆಪಿ

Sampriya
ಶನಿವಾರ, 16 ನವೆಂಬರ್ 2024 (16:19 IST)
ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ನೀಡಲು ನಯಾಪೈಸೆ ಹಣವಿಲ್ಲ.  ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ಕೊಡಲು ಹಣವಿಲ್ಲ. ಆದರೆ  ಭ್ರಷ್ಟಾಚಾರದ ಪಿತಾಮಹನ ಕಛೇರಿ ಕೊಠಡಿ ನವೀಕರಣ ಮಾಡಲು, ಐಶಾರಾಮಿ ವಸ್ತುಗಳ ಖರೀದಿಸಿ ಶೋಕಿ ಮಾಡಲು ಕೋಟಿ ಕೋಟಿ ಹಣವಿದೆ ಎಂದು ಬಿಜೆಪಿ ಆರೋಪ ಮಾಡಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದೆ.

ಭ್ರಷ್ಟ ಸಿದ್ದರಾಮಯ್ಯನವರ ಅರಾಜಕ ಆಡಳಿತದಲ್ಲಿ,

ರಾಜ್ಯದ ಅಭಿವೃದ್ಧಿಗೆ ನೀಡಲು ನಯಾಪೈಸೆ ಹಣವಿಲ್ಲ.

ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ಕೊಡಲು ಹಣವಿಲ್ಲ.


ರೈತರ ಹಾಲಿಗೆ ಪ್ರೋತ್ಸಾಹಧನ ನೀಡಲು ಹಣವಿಲ್ಲ.

ನರೇಗಾ ಯೋಜನೆಯಡಿ ದುಡಿಯುವವರಿಗೆ ನೀಡಲು ದುಡ್ಡಿಲ್ಲ.

ಸಾರಿಗೆ ಸಂಸ್ಥೆಯ ಬಸ್‌ಗಳ ನಿರ್ವಹಣೆ, ನೌಕರರ ಸಂಬಳಕ್ಕೆ ಹಣವಿಲ್ಲ.

ಪಡಿತರ ಅಕ್ಕಿ ಬದಲು ಹಣ ನೀಡಲು ಬಿಡಿಗಾಸಿಲ್ಲ.

ಆದರೆ, ಭ್ರಷ್ಟಾಚಾರದ ಪಿತಾಮಹನ ಕಛೇರಿ ಕೊಠಡಿ ನವೀಕರಣ ಮಾಡಲು, ಐಶಾರಾಮಿ ವಸ್ತುಗಳ ಖರೀದಿಸಿ ಶೋಕಿ ಮಾಡಲು ಕೋಟಿ ಕೋಟಿ ಹಣವಿದೆ. ಸಿದ್ದರಾಮಯ್ಯನವರೇ, ರಾಜ್ಯದ ಜನ ನಿಮ್ಮ ಭ್ರಷ್ಟ, ಹಗರಣಗಳ ಆಡಳಿತಕ್ಕೆ ಬೇಸತ್ತಿದ್ದಾರೆ. ಜನರೇ ದಂಗೆಯೆದ್ದು ನಿಮ್ಮನ್ನು ವಿಧಾನಸೌಧದಿಂದ ಆಚೆ ಹಾಕುವ ಮೊದಲು ರಾಜೀನಾಮೆ ನೀಡಿ, ಮನೆಗೆ ಹೊರಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Andhrapradesh Temple Stampede: ಈ ಅಂಶಗಳು ಶ್ರೀಕಾಕುಳಂ ಕಾಲ್ತುಳಿತಕ್ಕೆ ಕಾರಣವಾಯಿತೇ

ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿಗಾದಿ ಕುರಿತು ಸಿದ್ದು ಆಪ್ತ ಭೈರತಿ ಸುರೇಶ್ ಸ್ಫೋಟಕ ಹೇಳಿಕೆ

ಶ್ರೀಕಾಕುಳಂ ಕಾಲ್ತುಳಿತ ಶಾಕಿಂಗ್ ದುರ್ಘಟನೆ: ಕೆ ಕವಿತಾ

ನನ್ನ ಮಾತು ಕೇಳ್ತಿದ್ರೆ ಯಡಿಯೂರಪ್ಪ ಜೈಲಿಗೆ ಹೋಗ್ತಿರ್ಲಿಲ್ಲ: ಜಮೀರ್‌ ಅಹಮದ್ ಖಾನ್

ಗ್ಯಾರಂಟಿಗಳಿಂದ ಅನುದಾನ ಸಿಕ್ತಿಲ್ಲ, ಶಾಸಕರು ಕಾಲಿಗೆ ಬೀಳ್ತಿದ್ದಾರೆ: ಜಮೀರ್ ಅಹ್ಮದ್

ಮುಂದಿನ ಸುದ್ದಿ
Show comments