ನಟರ ಮನೆಮೇಲೆ ಐಟಿ ದಾಳಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ- ಸಚಿವ ವೆಂಕಟರಾವ್ ನಾಡಗೌಡ

Webdunia
ಶನಿವಾರ, 5 ಜನವರಿ 2019 (12:46 IST)
ಕೊಪ್ಪಳ : ಸ್ಯಾಂಡಲ್‍ವುಡ್ ಸ್ಟಾರ್ ನಟರ ಮನೆಮೇಲೆ ಐಟಿ ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್‍ವುಡ್ ಸ್ಟಾರ್ ನಟರ ಮನೆಮೇಲೆ ಐಟಿ ದಾಳಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಶುಸಂಗೋಪನಾ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ ಎಂಬುದನ್ನು ಮೋದಿಯವರ ಬಳಿಯೇ ಕೇಳಬೇಕು. ನನ್ನ ಕೇಳಿದ್ರೆ ಏನ್ ಹೇಳಲಿ. ಐಟಿ ಮುಂಚೆಯಿಂದಲೂ ಇದ್ದ ಇಲಾಖೆ. ಈಗ ಅದು ಮೋದಿಯವರ ಕೈಯಲ್ಲಿ ಬಹಳ ವ್ಯತಿರಿಕ್ತವಾಗಿ ಉಪಯೋಗವಾಗುತ್ತಿದೆ. ಈ ಮೂಲಕ ಏನೆಲ್ಲ ಮಾಡೋದಿಕೆ ಸಾಧ್ಯ ಇದೆಯೋ ಅವೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ


ಸಿನಿಮಾ ನಟರು ಹೆಚ್ಚೇನಲ್ಲ. ಬರೀ ರಾಜಕಾರಣಿಗಳ ಮೇಲಷ್ಟೇ ಐಟಿ ದಾಳಿಯಾಗಬೇಕಾ ಎಂದು ಪ್ರಶ್ನಿಸಿದ್ರು. ಸಿನಿಮಾ ನಟರು, ವಕೀಲರು, ವೈದ್ಯರ ಮೇಲೂ ಐಟಿ ದಾಳಿಯಾಗುತ್ತದೆ. ಯಾರು ಸಂಪತ್ತು ಜಾಸ್ತಿ ಗಳಿಸಿದ್ದಾರೆ ಅವರ ಮೇಲೆ ರೇಡ್ ಮಾಡುತ್ತಾರೆ. ಬಡವರ ಮೇಲೆ ದಾಳಿ ಮಾಡಕ್ಕಾಗುತ್ತಾ..? ರಾಜಕಾರಣಕ್ಕೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ಸಿನಿಮಾ ನಟರ ಮೇಲೆ ಯಾಕೆ ಪಾಪ ರಾಜಕಾರಣ ಮಾಡ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಪತಿ, ಶಿರಡಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ, ಪ್ರಯಾಣಿಕರಿಗೆ ಗುಡ್‌ನ್ಯೂಸ್

ಸಾಲ ವಜಾ ಮಾಡಿದ್ದರಲ್ಲಿ ಮೋದಿಗೆ ಎಷ್ಟು ಪಾಲು ಹೋಗಿದೆ: ಸಿದ್ದರಾಮಯ್ಯ ವ್ಯಂಗ್ಯ

ಋತುಚಕ್ರ ರಜೆ ತೀರ್ಪಿಗೆ ಕೆಲವೇ ಕ್ಷಣಗಳಲ್ಲಿ ಬದಲಾವಣೆ ಮಾಡಿದ ಹೈಕೋರ್ಟ್

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಗುದ್ದಾಟದಲ್ಲಿ ರೈತರು ಸಂಕಷ್ಟದಲ್ಲಿ: ಬಿವೈ ವಿಜಯೇಂದ್ರ

ವಿಧಾನಸಭೆ ಒಳಗೆಯೂ ಕಾಂಗ್ರೆಸ್ ಹೋರಾಟ: ಆರ್.ಅಶೋಕ್

ಮುಂದಿನ ಸುದ್ದಿ
Show comments