ಉಚಿತ ಔಷಧಿ ವಿತರಣೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಆರೋಗ್ಯ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಯಾವುದೇ ತನಿಖೆಗೂ ಸಿದ್ದವಾಗಿದ್ದೇನೆ ಎಂದು ವಿಕಾಸಸೌಧದಲ್ಲಿ ಹೇಳಿದ್ದಾರೆ.
ಎನ್‌ಎಚ್‌ಎಮ್ ಯೋಜನೆ ಅಡಿಯಲ್ಲಿ 1463 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ 1248 ಕೋಟಿ ರೂಪಾಯಿ ಹಂಚಿಕೆಯಾಗಿದೆ. ಹೀಗಿದ್ದ ಮೇಲೆ ಇಲಾಖೆಯಲ್ಲಿ 1463 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ ಎಂದು ಖಾದರ್ ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಮಾಜಿ ಸದಸ್ಯ ಎಸ್.ಆರ್.ರಮೇಶ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಕೆಲವರಿಗೆ ದೇಹ ಬೆಳೆದಿರುತ್ತದೆ. ಹೊರತು ಬುದ್ಧಿ ಬೆಳೆದಿರುವುದಿಲ್ಲ. ನಿಮಾನ್ಸ್‌ನಂತಹ ಸಾಕಷ್ಟು ಆಸ್ಪತ್ರೆಗಳಿವೆ, ರಮೇಶ್ ಅವರು ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಲಿ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಚಿತ ಔಷಧಿ ಪೂರೈಸುವ ಯೋಜನೆಯಲ್ಲಿ ಅಸ್ಥಿತ್ವದಲ್ಲಿ ಇಲ್ಲದ ಕಂಪನಿಗಳ ಬಿಲ್‌ಗಳ ದಾಖಲಿಸಿ, ಅವ್ಯವಹಾರ ನಡೆಸಿದ್ದಾರೆಂದು ಆರೋಗ್ಯ ಸಚಿವ ಯುಟಿ ಖಾದರ್, ಅರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಇಲಾಖೆ ಆಯುಕ್ತ ಪಿ.ಎಸ್.ವಸ್ತ್ರದ ಸೇರಿದಂತೆ 10 ಅಧಿಕಾರಗಳ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯ ಎಸ್.ಆರ್.ರಮೇಶ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.