Select Your Language

Notifications

webdunia
webdunia
webdunia
webdunia

ಭಯೋತ್ಪಾದಕರಿಗೂ, ಸಿದ್ದರಾಮಯ್ಯಗೂ ಯಾವುದೇ ವ್ಯತ್ಯಾಸವಿಲ್ಲ: ಅರವಿಂದ ಬೆಲ್ಲದ ಗರಂ

ಪಹಲ್ಗಾಮ್ ಉಗ್ರರ ದಾಳಿ

Sampriya

ಹುಬ್ಬಳ್ಳಿ , ಶನಿವಾರ, 26 ಏಪ್ರಿಲ್ 2025 (18:43 IST)
Photo Credit X
ಹುಬ್ಬಳ್ಳಿ:  ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ವೇಳೆ ಉಗ್ರರು  ಧರ್ಮದ ಹೆಸರು ಕೇಳಿ ಗುಂಡು ಹೊಡೆದಿಲ್ಲ ಎಂದ ಸಿದ್ದರಾಮಯ್ಯಗೂ, ಭಯೋತ್ಪಾದಕರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು  ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು.  

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದ ಮೇಲೆ ಪಾಕ್‌ನ ಉಗ್ರರು ದಾಳಿ ನಡೆಸಿದಾಗಲೂ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಪರ ಮಾತನಾಡುತ್ತಿದ್ದಾರೆ. ದೇಶದ ಭದ್ರತೆ ಎಂದಾಗ ಯಾವುದೇ ಜಾತಿ, ಧರ್ಮವಿಲ್ಲದೆ ಯೋಚನೆ ಮಾಡಬೇಕು.

ಸಿಎಂ ಸಿದ್ದರಾಮಯ್ಯ ಅವರು ಪಾಕಿಸ್ತಾನದ ವಿರುದ್ಧ ಯುದ್ಧ ನಡೆದರೆ ರಾಜ್ಯದ ಮುಸ್ಲಿಮರು ಏನೆಂದುಕೊಳ್ಳುತ್ತಾರೋ ಎಂದು ಅವರು ಬಾಲಿಶವಾಗಿ ಹೇಳಿಕೆ ನೀಡುತ್ತಿದ್ದಾರೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ದೇಶದ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನವನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸಮರ್ಥವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತವಿದ್ದಾಗ ಕಾಶ್ಮೀರದಲ್ಲಿ ಯಾವ ಪರಿಸ್ಥಿತಿಯಿತ್ತು, ಬಿಜೆಪಿ ಆಡಳಿತವಿದ್ದಾಗ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.

ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದರೆ, ಅವರದ್ದೇ ಪಕ್ಷದ ಸಚಿವ ಸಂತೋಷ ಲಾಡ್‌ ಅದರ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

Gold fraud case: ಇಡಿ ದಾಳಿ ವೇಳೆ ಐಶ್ವರ್ಯಾ ಗೌಡ ಮನೆಯಲ್ಲಿ ಸಿಕ್ತು ಕಂತೆ ಕಂತೆ ಹಣ, ಇಲ್ಲಿದೆ ಮಾಹಿತಿ