Select Your Language

Notifications

webdunia
webdunia
webdunia
webdunia

ಮಾರ್ಕೆಟ್ ನಲ್ಲಿ ಲಗ್ಗೆ ಇಟ್ಟ ವಿವಿಧ ಬಗೆಯ ಗೊಂಬೆಗಳು

ಮಾರ್ಕೆಟ್ ನಲ್ಲಿ ಲಗ್ಗೆ ಇಟ್ಟ ವಿವಿಧ ಬಗೆಯ ಗೊಂಬೆಗಳು
bangalore , ಶುಕ್ರವಾರ, 23 ಸೆಪ್ಟಂಬರ್ 2022 (19:10 IST)
ದಸರಾ ಹಬ್ಬ ಕರ್ನಾಟಕದ ಜನತೆಯ ಮನಸ್ಸಿಗೆ ಧಾರ್ಮಿಕವಾಗಿಯೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಬಹಳ ಹತ್ತಿರವಾದ ಹಬ್ಬ. ಮೈಸೂರು ದಸರಾ, ಆನೆ ಅಂಬಾರಿ ಹತ್ತಿ ಲೋಕವನ್ನು ಹರಿಸುವ ಚಾಮುಂಡೇಶ್ವರಿ ದೇವಿ, ಅರಮನೆಯ ಸಡಗರಗಳಷ್ಟೇ ಅಲ್ಲದೆ, ಮನೆ ಮನೆಗಳಲ್ಲಿ ಕೂರಿಸುವ ಗೊಂಬೆಗಳು ಕೂಡ ದಸರಾ ಹಬ್ಬದ ವಿಶೇಷ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗಳಲ್ಲಿ ಗೊಂಬೆ ಹಬ್ಬ ಜನಪ್ರಿಯ. ದಸರಾದಲ್ಲಿ ಗೊಂಬೆ ಕೂರಿಸುವ ಪದ್ಧತಿ 18ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿದೆ. ಗೊಂಬೆ ಕೂರಿಸುವ ಪದ್ಧತಿ ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತ್ತು. ಮೈಸೂರು ಅರಮನೆಯಲ್ಲಿ ಹಬ್ಬದ  ನಡೆದರೆ, ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು. 
 
ಸಮಸ್ತ ಸೃಷ್ಟಿ ಒಂದೇ ವಸ್ತುವಿನಿಂದ ಆಗಿದೆ ಎಂದು ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಸಂಕೇತ. ಬೊಂಬೆಗಳನ್ನು ಕೂರಿಸುವುದರಲ್ಲಿ ದೇವತೆಗಳಿಂದ ಹಿಡಿದು ಸಾಧು-ಸಂತರು, ಸತ್ಪುರುಷರು, ಸಾಮಾನ್ಯ ಮನುಷ್ಯರು, ಜನರ ಜೀವನಶೈಲಿ, ಹಳ್ಳಿ ಬದುಕು, ವ್ಯಾಪಾರ, ಕೃಷಿ, ಕ್ರೀಡೆ, ಉದ್ಯೋಗ ಪಶು-ಪಕ್ಷಿಗಳು ಹೀಗೆ ಸಕಲವೂ ದೇವರ ಅನುಗ್ರಹವಾಗಿದ್ದು, ಯಾವುದನ್ನೂ ತುಚ್ಛವಾಗಿ ನೋಡಬಾರದು, ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಮುಖ್ಯವೇ ಎಂದು ಬೊಂಬೆಗಳು ಸಂದೇಶ ಸಾರುತ್ತವೆ.
 
ಮನೆಗಳಲ್ಲಿ ಗೊಂಬೆ ಕೂರುವಾಗ ಸ್ಥಳಾವಕಾಶವನ್ನು ನೋಡಿಕೊಂಡು 3,5,7,9 ಹಂತಗಳಲ್ಲಿ ಕೂರಿಸುತ್ತಾರೆ. ಹೆಚ್ಚು ಗೊಂಬೆಗಳು ಇದ್ದವರು 9 ಹಂತಗಳಲ್ಲಿ ಕೂರಿಸುತ್ತಾರೆ, ಇನ್ನು ಕೆಲವು 7 ಹಂತಗಳಲ್ಲಿ, 5 ಹಂತಗಳಲ್ಲಿ ಕೂರುತ್ತಾರೆ. ಗೊಂಬೆಗಳನ್ನು ಕೂರಿಸಲು ಮರದ ಸ್ಟ್ಯಾಂಡ್ಗಳನ್ನು ಬಳಸುತ್ತಾರೆ. ಮರದ ಸ್ಟ್ಯಾಂಡ್ ಇಲ್ಲದಿದ್ದರೆ ಸ್ಟೀಲ್ ಸ್ಟ್ಯಾಂಡ್ನ್ನೂ ಬಳಸಬಹುದು. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳು ಇವುಗಳನ್ನಿಟ್ಟು, ಎರಡು, ಮೂರು ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸುತ್ತಾರೆ.
 
 ಇತ್ತೀಚೆಗೆ ಹಳೆ ಸಂಪ್ರದಾಯದ ಗೊಂಬೆಗಳ ಜೊತೆ ಆಧುನಿಕ ಸ್ಪರ್ಶ. ಮರದ, ಮಣ್ಣಿನ ಗೊಂಬೆ ಜೊತೆಗೆ ಇತ್ತೀಚೆಗೆ ಕಾಗದಗಳಿಂದ ತಯಾರಿಸುವ ಗೊಂಬೆಗಳು ಸಹ ನಾನಾ ಅಲಂಕಾರಗಳು, ವಿವಿಧ ಬಣ್ಣಗಳ ಗೊಂಬೆಗಳು ಸಿಗುತ್ತಾವೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಜೋಡೋ ವಿಚಾರವಾಗಿ ಪ್ರತ್ಯೇಕ ಸಭೆ ನಡೆಸಲಿರುವ ಕಾಂಗ್ರೆಸ್ ನಾಯಕರು