Select Your Language

Notifications

webdunia
webdunia
webdunia
webdunia

ಬಸ್​ಗೆ ಕಲ್ಲೆಸೆದ ಮಹಿಳೆ

ಬಸ್​ಗೆ ಕಲ್ಲೆಸೆದ ಮಹಿಳೆ
ಕೊಪ್ಪಳ , ಬುಧವಾರ, 28 ಜೂನ್ 2023 (16:30 IST)
ಬಸ್ ನಿಲ್ಲಿಸದ ಬಸ್​ಗೆ ಮಹಿಳೆ ಕಲ್ಲೆಸದಿರುವ ಘಟನೆ ಕೊಪ್ಪಳದ ಹೊಸಲಿಂಗಾಪುರ ಬಳಿ ನಡೆದಿದೆ. ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಮಹಿಳೆ ಕಲ್ಲೆಸದಿದ್ದಾರೆ. ಕಲ್ಲು ಎಸೆದ ಹಿನ್ನೆಲೆ ಪ್ಯಾಸೆಂಜರ್ ಸಮೇತ ಡ್ರೈವರ್ & ಕಂಡಕ್ಟರ್ ಪೊಲೀಸ್ ಠಾಣೆಗೆ ಬಸ್ ತಂದಿದ್ದಾರೆ. ಬಸ್ ‌ನಿಲ್ಲಿಸದ ಕೋಪಕ್ಕೆ ಲಕ್ಷ್ಮಿ ಎನ್ನುವ ಮಹಿಳೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಲಕ್ಷ್ಮಿ ಇಲಕಲ್ ಬಳಿಯ ಪಾಪನಳ್ಳಿ ನಿವಾಸಿ ಎನ್ನಲಾಗಿದೆ. ತನ್ನ ಊರಿಗೆ ತೆರಳಲು ಯಾವುದೇ ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್​ಗೆ ಕಲ್ಲೆಸೆದಿದ್ದಾರೆ. ಬಸ್ ಡ್ಯಾಮೇಜ್ ಹಿನ್ನೆಲೆ ಬಸ್ ಡಿಪೋ ಮ್ಯಾನೇಜರ್ 5 ಸಾವಿರ ದಂಡ ಕೊಡಿ, ಇಲ್ಲವಾದಲ್ಲಿ FIR ಮಾಡುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿ ಲಕ್ಷ್ಮಿ ದಂಡ ಕಟ್ಟಿ ಕೊನೆಗೆ ಅದೇ ಬಸ್​ನಲ್ಲಿ ಲಕ್ಷ್ಮಿ ತರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳೆದ ಬಿಜೆಪಿಯಲ್ಲಿ ಬಹಳ ವಿಭಿನ್ನವಾಗಿ ಸ್ಕ್ಯಾಮ್ ಮಾಡಿದ್ದಾರೆ- ಸಚಿವ ಪ್ರಿಯಾಂಕ ಖರ್ಗೆ