Select Your Language

Notifications

webdunia
webdunia
webdunia
webdunia

ಆಕಸ್ಮಿಕವಾಗಿ ಅಜ್ಜಿಯನ್ನು ಕೊಂದ ಮಹಿಳೆ, ಬಳಿಕ ತಾನೂ ನೇಣಿಗೆ ಶರಣು

The woman who killed her grandmother by accident
bangalore , ಭಾನುವಾರ, 27 ಫೆಬ್ರವರಿ 2022 (20:34 IST)
25 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ ತನ್ನ ಅಜ್ಜಿಯನ್ನು ಗೋಡೆಗೆ ತಳ್ಳಿದ್ದು, ಅಜ್ಜಿ ಸಾವನ್ನಪ್ಪಿದ್ದಾರೆ. ಅಜ್ಜಿ ಸಾವಿನಿಂದ ಆಘಾತಕ್ಕೊಳಗಾದ ಮಹಿಳೆ ಬಳಿಕ ತಾನೂ  ನೇಣು ಬಿಗಿದುಕೊಂಡು25 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ ತನ್ನ ಅಜ್ಜಿಯನ್ನು ಗೋಡೆಗೆ ತಳ್ಳಿದ್ದು, ಅಜ್ಜಿ ಸಾವನ್ನಪ್ಪಿದ್ದಾರೆ. ಅಜ್ಜಿ ಸಾವಿನಿಂದ ಆಘಾತಕ್ಕೊಳಗಾದ ಮಹಿಳೆ ಬಳಿಕ ತಾನೂ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಂಜೆ ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಅವರ ಮನೆಯಲ್ಲಿ ನಡೆದಿದೆ.
 
ಮಾರುತಿ ಲೇಔಟ್ ನಿವಾಸಿಗಳಾದ ಬಿಕಾಂ ಪದವೀಧರರಾದ ಮಮತಾ (25) ಅವರ ಅಜ್ಜಿ ಜಯಮ್ಮ (70) ಸಂಜೆ 4.30ರ ಸುಮಾರಿಗೆ ಇಬ್ಬರೂ ಜಗಳ ಮಾಡಿದ್ದಾರೆ. ಈ ವೇಳೆ ಮಮತಾ ತಮ್ಮ ಅಜ್ಜಿಯನ್ನು ಗೋಡೆಗೆ ತಳ್ಳಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಜಯಮ್ಮ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾರೆ. ಆಕೆ ಸತ್ತಿರುವುದನ್ನು ಕಂಡು ಆಘಾತಕ್ಕೊಳಗಾದ ಮಮತಾ ಬೆಡ್ ರೂಮಿಗೆ ಬೀಗ ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ. ಮಮತಾ ಅವರ ಸಹೋದರ ಚೇತನ್ ಅವರು ಕೆಲಸದಿಂದ ಹಿಂದಿರುಗಿದ ನಂತರ ಮೃತದೇಹಗಳು ಪತ್ತೆಯಾಗಿವೆ. ಅವರು ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಬಳಿಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
 
ಮಮತಾ ಅವರ 3 ತಿಂಗಳ ಮಗು ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ ನಂತರ ಖಿನ್ನತೆಗೆ ಒಳಗಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಂಗಡಿ ನಡೆಸುತ್ತಿರುವ ಪತಿ ಮಂಜುನಾಥ್ ಅವರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
 
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು  ಜ್ಞಾನಭಾರತಿ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಬಿಟ್ಟು ಹೋದ ಹೆಂಡತಿಯನ್ನು ತಬ್ಬಿಕೊಂಡು ಜಿಲೆಟಿನ್ ಸ್ಫೋಟಿಸಿದ ಗಂಡ