Select Your Language

Notifications

webdunia
webdunia
webdunia
webdunia

'ವಾಯಾವಿ' ವಾಚ್ ಜೀವ ಉಳಿಸಿತು

'ವಾಯಾವಿ' ವಾಚ್ ಜೀವ ಉಳಿಸಿತು
ವಾಷಿಂಗ್ಟನ್ , ಮಂಗಳವಾರ, 24 ಸೆಪ್ಟಂಬರ್ 2019 (19:39 IST)
ಹಣೆಯಲ್ಲಿ ಆಯುಷ್ಯ ಬರೆದಿದ್ದರೆ ಏನೇ ಆದರೂ ಬದುಕಬಹುದು ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.

ಭಾರೀ ಅಪಘಾತಕ್ಕೊಳಗಾದರೂ ಬಿದ್ದರೂ ತನ್ನ 'ಮಾಯಾವಿ' Apple ಸ್ಮಾರ್ಟ್ ವಾಚ್ ನಿಂದಾಗಿ ವ್ಯಕ್ತಿಯೊಬ್ಬ ಬದುಕುಳಿದ ಘಟನೆ ಅಮೆರಿಕದ ವಾಷಿಂಗ್ಟನ್ ನ ಸ್ಪೊಕೇನ್ ನಲ್ಲಿ ನಡೆದಿದೆ.

ಬಾಬ್ ಎಂಬ ವ್ಯಕ್ತಿ ತಮ್ಮ ಮಗ ಗೇಡ್ ಬರ್ಡೆಟ್ ನನ್ನು ಭೇಟಿಯಾಗಲು ಹೊರಟಿದ್ದ. ಆಗ ಬೈಕ್ ಅಪಘಾತಕ್ಕೀಡಾಗಿತ್ತು. ಆಗ ಅವರು ಧರಿಸಿದ್ದ ವಾಚ್ ಅವರು ಸೇವ್ ಮಾಡಿದ್ದ ಎಮರ್ಜೆನ್ಸಿ ನಂಬರ್ ಗೆ ಆಟೋಮೆಟಿಕ್ ಆಗಿ ಮೆಸೇಜ್ ಕಳಿಸಿತ್ತು. 'ಬಾಬ್ ಸಂಕಷ್ಟದಲ್ಲಿದ್ದಾನೆ' ಎಂದು ಅದು ಮಗನಿಗೆ ತಿಳಿಸಿತ್ತು.

ನಂತರ ಬಾಬ್ ಇದ್ದ ಲೊಕೆಶನ್ ಸಹ ಕಳಿಸಿತ್ತು. ಕೂಡಲೆ ಗೇಡ್ ಅಂಬುಲೆನ್ಸ್ ಗೆ ಫೋನ್ ಮಾಡಿ ಲೊಕೆಶನ್ ಕಳಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತರವೂ, "ಬಾಬ್ ಆಸ್ಪತ್ರೆಯಲ್ಲಿದ್ದಾರೆ" ಎಂಬ ಸಂದೇಶವನ್ನೂ ಈ ವಾಚ್ ನೀಡಿತ್ತು!
ಅಂದು ಸ್ಮಾರ್ಟ್ ವಾಚ್ ಕಟ್ಟದೆ ಇದ್ದಿದ್ದರೆ ತನ್ನ ತಂದೆ ಬದುಕುತ್ತಲೇ ಇರಲಿಲ್ಲ ಎನ್ನುತ್ತಾರೆ ಗೇಡ್.  


Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಗೋಲ್ ಮಾಲ್ : ಊರಿನ ಜಾಗವೆಲ್ಲ ಒಬ್ಬನಿಗೇ ಇ ಖಾತೆ