ಕಾಫಿ ತೋಟ ನಾಶ ಮಾಡಿದ ದುರುಳರು

Webdunia
ಶನಿವಾರ, 4 ಮಾರ್ಚ್ 2023 (16:58 IST)
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ, ಅಡಿಬೈಲು ಗ್ರಾಮದಲ್ಲಿ ವಿಶೇಷಚೇತನ ಚಂದ್ರು ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ 450ಕ್ಕೂ ಹೆಚ್ಚು ಫಸಲು ಬಿಡುವ ಕಾಫಿ ಹಾಗೂ ಮೆಣಸಿನ ಗಿಡಗಳನ್ನು ದುರುಳರು ನಾಶ ಮಾಡಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಹನ್ನೆರಡು ವರ್ಷಗಳಿಂದ ಕಷ್ಟಪಟ್ಟು ಕಾಫಿ, ಮೆಣಸಿನ ಗಿಡಗಳನ್ನು ಬೆಳೆಸಿದ್ದರು. ಆದರೆ ದುಷ್ಕರ್ಮಿಗಳು ಕಾಫಿ, ಮೆಣಸಿನ ಗಿಡಗಳನ್ನು ಕಡಿದು ಸಂಪೂರ್ಣ ನಾಶ ಮಾಡಿದ್ದಾರೆ. ಕುಟುಂಬ ನಿರ್ವಹಣೆ ಹಾಗೂ ಜೀವನಾಧಾರವಾಗಿದ್ದ ಕಾಫಿ, ಮೆಣಸಿನ ಗಿಡಗಳನ್ನು ಕಳೆದುಕೊಂಡು ಚಂದ್ರು ಹಾಗೂ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ. ಈ ಹೀನ ಕೃತ್ಯವೆಸಗಿದ ದುರುಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೆಟ್ಟಿಲು ಹತ್ತುವಾಗ ಹೃದಯ ಖಾಯಿಲೆ ಪರೀಕ್ಷಿಸುವುದು ಹೇಗೆ: ಡಾ ಸಿಎನ್ ಮಂಜುನಾಥ್ ಟಿಪ್ಸ್

ಮಲ್ಲಿಕಾರ್ಜುನ ಖರ್ಗೆ ಜೊತೆ ಸೋನಿಯಾ ಗಾಂಧಿ ಮೀಟಿಂಗ್: ಮೇಡಂ ಕೈಯಲ್ಲಿ ಎಲ್ಲಾ ಇದೆ

ಸಿಎಂ ಜೊತೆ ಭಿನ್ನಾಭಿಪ್ರಾಯ ಇಲ್ಲ ಎಂದ ಡಿಕೆ ಶಿವಕುಮಾರ್: ಆದರೆ ಕತೆ ಬೇರೆಯೇ ಇದೆ..

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ: ವಿಪಕ್ಷಗಳಿಗೆ ಸಿಕ್ಕಿದೆ ಎರಡು ಅಸ್ತ್ರ

Karnataka Weather: ಬೆಂಗಳೂರು ಚಳಿಗೆ ಗಡ, ಗಡ: ಈ ವಾರದ ಹವಾಮಾನ ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments