Select Your Language

Notifications

webdunia
webdunia
webdunia
webdunia

ಲಂಚಕ್ಕಾಗಿ ಪೀಡಿಸಿದವರನ್ನು ಎತ್ತಿ ಹೊರಗೆ ಬಿಸಾಕಿದ ಗ್ರಾಮಸ್ಥರು

ಲಂಚಕ್ಕಾಗಿ ಪೀಡಿಸಿದವರನ್ನು ಎತ್ತಿ ಹೊರಗೆ ಬಿಸಾಕಿದ ಗ್ರಾಮಸ್ಥರು
ಬೆಳಗಾವಿ , ಗುರುವಾರ, 11 ಮೇ 2017 (14:05 IST)
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಗ್ರಾಮಸ್ಥರು ಭ್ರಷ್ಟ, ಲಂಚಬಾಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
 
ಪ್ರತಿನಿತ್ಯ ಗ್ರಾಮಸ್ಥರಿಂದ ಲಂಚಕ್ಕಾಗಿ ಪೀಡಿಸುತ್ತಿದ್ದ ಅಧಿಕಾರಿ ಮತ್ತು ಇತರ ಸಿಬ್ಬಂದಿಗಳನ್ನು ಗ್ರಾಮಸ್ಥರು ಎತ್ತಿ ಹೊರಗೆ ಬಿಸಾಕಿದ್ದಾರೆ. ಕಚೇರಿ ಸಿಬ್ಬಂದಿಗಳ ಲಂಚಬಾಕತನದಿಂದ ಬೇಸತ್ತ ಗ್ರಾಮಸ್ಥರು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
 
ಗ್ರಾಮಸ್ಥರು ಅಧಿಕಾರಿಗಳನ್ನು ಕಚೇರಿಯಿಂದ ಎತ್ತಿ ಹೊರಗೆ ಬಿಸಾಕಿದ ನಂತರ ಕಚೇರಿಗೆ ಬಿಗ ಜಡಿದಿದ್ದರಿಂದ ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಚಿಕ್ಕೊಡಿ ತಾಲೂಕಿನ ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. 
 
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ಗ್ರಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿಗೆ ಹಾಲಿ ಅಧ್ಯಕ್ಷರು ಮುಂದುವರಿದ್ರೆ ಒಳ್ಳೆಯದು: ಸತೀಶ್ ಜಾರಕಿಹೊಳಿ